alex Certify ಇಂತದೊಂದು ಅನುಮಾನಕ್ಕೆ ಕಾರಣವಾಗಿದೆ ನಟಿ ರಮ್ಯಾ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತದೊಂದು ಅನುಮಾನಕ್ಕೆ ಕಾರಣವಾಗಿದೆ ನಟಿ ರಮ್ಯಾ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್

ನಟಿ ರಮ್ಯಾ ಸಿನಿಮಾ, ರಾಜಕೀಯ ಎಲ್ಲದರಿಂದಲೂ ದೂರ ಇದ್ದಾರೆ. ಈ ನಟಿ ಸದ್ಯ ಎಲ್ಲಿದ್ದಾರೆ ? ಏನು ಮಾಡುತ್ತಿದ್ದಾರೆ ? ಅನ್ನೋ ಖಚಿತ ಮಾಹಿತಿ ಕೂಡ ಇಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಬಂದೋಗುತ್ತಿರುತ್ತಾರೆ ಈ ನಟಿ. ಇದೀಗ ಈ ನಟಿಯ ಒಂದು ಪೋಸ್ಟ್ ವೈರಲ್ ಆಗುವುದರ ಜೊತೆಗೆ ಅನುಮಾನ ಮೂಡಿಸುವಂತಿದೆ.

ಹೌದು, ಭಾನುವಾರ ಈ ನಟಿ ಆಧ್ಯಾತ್ಮದ ಒಂದಷ್ಟು ಪೋಸ್ಟ್ ‌ಗಳನ್ನು ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದರು. ಜೊತೆಗೆ ಗಾಯತ್ರಿ ಮಂತ್ರ ಸೇರಿದಂತೆ ಒಂದಷ್ಟು ಅಧ್ಯಾತ್ಮದ ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ. ಹೀಗಾಗಿ ಈ ನಟಿ ಸಿನಿಮಾ, ರಾಜಕೀಯ ಬಿಟ್ಟು ಆಧ್ಯಾತ್ಮದತ್ತ ವಾಲಿದ್ದಾರಾ ಅನ್ನೋ ಪ್ರಶ್ನೆ ಮೂಡುತ್ತಿದೆ.

ಈ ನಟಿ ಬೌದ್ಧ ಸನ್ಯಾಸಿ ಲಾಮಾ ಅವರ ಚಾಂಟ್‌ಗಳನ್ನು ಕೇಳುವ ಹಾಗೂ ಅದರ ಅರ್ಥವನ್ನು ಇನ್ನೊಂದು ಸ್ಟೇಟಸ್‌ನಲ್ಲಿ ಹಾಕಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ರಮ್ಯಾ ದೇವರು, ಆಧ್ಯಾತ್ಮ ಅಂತ ಆ ಕಡೆ ವಾಲಿದ್ದಾರಾ ಎಂಬ ಅನುಮಾನ ಮೂಡುತ್ತಿವೆ. ಆದರೆ ಇದಕ್ಕೆಲ್ಲ ರಮ್ಯಾ ಅವರೇ ಉತ್ತರ ನೀಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...