alex Certify ಅಣ್ಣನ ವೈವಾಹಿಕ ಬದುಕಿಗೆ ಮುಳ್ಳಾದರಾ‌ ನಟ ಸಲ್ಮಾನ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಣ್ಣನ ವೈವಾಹಿಕ ಬದುಕಿಗೆ ಮುಳ್ಳಾದರಾ‌ ನಟ ಸಲ್ಮಾನ್…?

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರು ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಇಂದು ನಿನ್ನೆಯದಲ್ಲ. ಬಹು ದಿನಗಳಿಂದಲೂ ಈ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಜೋಡಿ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವುದು.

1998ರಲ್ಲಿ ಮಲೈಕಾ ಮತ್ತು ಅರ್ಬಾಜ್ ಮದುವೆಯಾಗಿದ್ದರು. ಇದಾದ ನಂತರದಲ್ಲಿ ಹಲವು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದು ದೂರವಾದರು. ಆದರೆ ಇದೀಗ ಈ ಕೌಟುಂಬಿಕ ಜಗಳಕ್ಕೆ ಕಾರಣ ಏನು ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಹೌದು, ಅರ್ಬಾಜ್ ಹಾಗೂ ಮಲೈಕಾ ದೂರ ಆಗಲು ಸಲ್ಮಾನ್ ಕೂಡ ಕಾರಣವಂತೆ. ಅವರ ಉಡುಗೆ ತೊಡುಗೆಗಳ ಬಗ್ಗೆ ಸಲ್ಮಾನ್ ಖಾನ್ ಗೆ ಅಸಮಾಧಾನ ಇತ್ತು ಎನ್ನಲಾಗಿದೆ. ಜೊತೆಗೆ ಮದುವೆಯ ನಂತರ ಅರ್ಬಾಜ್ ಹೇಳಿಕೊಳ್ಳುವಷ್ಟು ಏಳಿಗೆ ಹೊಂದಲಿಲ್ಲ ಎನ್ನಲಾಗಿದೆ. ಅದೇನೆ ಇರಲಿ ಲಾಕ್ ಡೌನ್ ಸಮಯದಲ್ಲಿ ಈ ಜೋಡಿಯ ವಿಚಾರ ಲೇಟೆಸ್ಟ್ ನ್ಯೂಸ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...