alex Certify ಅಂಬರೀಶ್ ಜೊತೆಗೂ ಅಭಿನಯಿಸಿದ್ದರು ರಿಷಿ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬರೀಶ್ ಜೊತೆಗೂ ಅಭಿನಯಿಸಿದ್ದರು ರಿಷಿ ಕಪೂರ್

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಗುರುವಾರದಂದು ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ 67 ವರ್ಷದ ರಿಷಿ ಕಪೂರ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪತ್ನಿ ನೀತು ಕಪೂರ್, ಪುತ್ರ ರಣಬೀರ್ ಕಪೂರ್ ಹಾಗೂ ಪುತ್ರಿ ರಿದ್ಧಿಮಾ ಅವರನ್ನು ರಿಷಿ ಕಪೂರ್ ಅಗಲಿದ್ದು, ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

ಮಲ್ಟಿ ಸ್ಟಾರರ್ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದ ರಿಷಿ ಕಪೂರ್ ಬಾಲಿವುಡ್ ನ ಬಹುತೇಕ ನಾಯಕರುಗಳ ಜೊತೆ ತೆರೆ ಹಂಚಿಕೊಂಡಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಟ ದಿವಂಗತ ಅಂಬರೀಶ್ ಅವರ ಜೊತೆಯಲ್ಲೂ ರಿಷಿ ಕಪೂರ್ ತೆರೆ ಹಂಚಿಕೊಂಡಿದ್ದು, ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಜಹ್ರೀಲಾ ಇನ್ಸಾನ್’ ನಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು.

ಈ ಚಿತ್ರ ‘ನಾಗರಹಾವು’ ರಿಮೇಕ್ ಆಗಿದ್ದು, ಜಲೀಲನ ಪಾತ್ರದಲ್ಲಿ ಅಂಬರೀಶ್ ಅಭಿನಯಿಸಿದ್ದರೆ, ರಿಷಿ ಕಪೂರ್ ನಾಯಕ ನಟನಾಗಿದ್ದರು. ಇದರ ಶೂಟಿಂಗ್ ಗಾಗಿ ಚಿತ್ರದುರ್ಗಕ್ಕೂ ರಿಷಿ ಕಪೂರ್ ಬಂದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...