alex Certify ʼಶೋಲೆʼ ಚಿತ್ರದ ಸುರ್ಮಾ ಭೂಪಾಲಿ ಖ್ಯಾತಿಯ ಹಿರಿಯ ನಟ ಜಗದೀಪ್‌ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶೋಲೆʼ ಚಿತ್ರದ ಸುರ್ಮಾ ಭೂಪಾಲಿ ಖ್ಯಾತಿಯ ಹಿರಿಯ ನಟ ಜಗದೀಪ್‌ ಇನ್ನಿಲ್ಲ

ಖ್ಯಾತ ನಟರಾದ ಅಮಿತಾಬ್‌ ಬಚ್ಚನ್‌ ಹಾಗೂ ಧರ್ಮೇಂದ್ರ ಅಭಿನಯದ ʼಶೋಲೆʼ ಚಿತ್ರದಲ್ಲಿ ಸುರ್ಮಾ ಭೂಪಾಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಹಿರಿಯ ನಟ ಜಗದೀಪ್‌ ವಿಧಿವಶರಾಗಿದ್ದಾರೆ.

81 ವರ್ಷದ ಜಗದೀಪ್,‌ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರೆನ್ನಲಾಗಿದ್ದು, ಕೊರೊನಾ ಕಾರಣಕ್ಕೆ ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸೈಯದ್‌ ಇಶ್ತಿಹಾಕ್‌ ಅಹ್ಮದ್‌ ಜಾಫ್ರಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ತಮ್ಮ ಹೆಸರನ್ನು ಜಗದೀಪ್‌ ಎಂದು ಬದಲಾಯಿಸಿಕೊಂಡಿದ್ದರು.

ನಟ ಜಾವೇದ್‌ ಜಾಫ್ರಿ ಇವರ ಪುತ್ರರಾಗಿದ್ದಾರೆ. 400 ಕ್ಕೂ ಅಧಿಕ ಚಿತ್ರಗಳಲ್ಲಿ ಜಗದೀಪ್‌ ಅಭಿನಯಿಸಿದ್ದು, 2012 ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡಿದ್ದ ಅಕ್ಷಯ್‌ ಖನ್ನಾ, ಶ್ರೀಯಾ ಸರಣ್‌ ಹಾಗೂ ಮುಗುದ ಗೋಡ್ಸೆ ಅಭಿನಯದ ʼಗಲಿ ಗಲಿ ಚೋರ್‌ ಹೈʼ ಜಗದೀಪ್‌ ಅಭಿನಯದ ಕೊನೆಯ ಚಿತ್ರವಾಗಿತ್ತು. ಜಗದೀಪ್‌ ನಿಧನಕ್ಕೆ ಬಾಲಿವುಡ್‌ ಚಿತ್ರರಂಗ ಕಣ್ಣೀರು ಮಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...