ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ರಂಗಾಯಣ ರಘು ಇಂದು ತಮ್ಮ 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಂಗಾಯಣ ರಘು ಆರಂಭದಲ್ಲಿ 1995ರಂದು ಹಂಸಲೇಖ ನಿರ್ದೇಶನದ ‘ಸುಗ್ಗಿ’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ‘ಕೋತಿಗಳು ಸಾರ್ ಕೋತಿಗಳು’ ಹಾಗೂ ‘ಧಮ್’ ಸಿನಿಮಾ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಹಾಸ್ಯ ಕಲಾವಿದನಾಗಿ ಪೋಷಕ ನಟನಾಗಿ ಮತ್ತು ಖಳನಾಯಕನಾಗಿ ಹೀಗೆ ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಸಿನಿ ರಸಿಕರನ್ನು ರಂಜಿಸುತ್ತಾ ಬಂದಿರುವ ಇವರು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಫೆರಾರಿ ಮಂಚೂರಿ, ಮಿರ್ಚಿ ಜಿಲೇಬಿ ಬಳಿಕ ಇದೀಗ ಟ್ರೆಂಡ್ ಸೆಟ್ ಮಾಡಿದ ಮ್ಯಾಗಿ ಲಡ್ಡು..!
ರಂಗಾಯಣ ರಘು ಸುಮಾರು 250ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಾಯಣ ರಘು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊಟ್ಟೂರಿನಲ್ಲಿ ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.