ಮಹಿಳೆಯರಿಗೆ ತುಂಬಾ ಖುಷಿ ಕೊಡುವ ವಿಚಾರಗಳಲ್ಲಿ ತಾಯಿಯಾಗುವ ಸಂಭ್ರಮ ಕೂಡ ಒಂದು. ಈ ಸುಂದರ ಘಳಿಗೆಯನ್ನ ಒಬ್ಬೊಬ್ಬರು ಒಂದೊಂದು ರೀತಿ ಸಂಭ್ರಮಿಸುತ್ತಾರೆ. ಇದೀಗ ಕುಂಕುಮ ಭಾಗ್ಯ ಧಾರಾವಾಹಿ ನಟಿ ಕೂಡ ತನ್ನ ತಾಯ್ತನದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
ಹೌದು, ಅನೇಕ ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ನಟಿ ಶಿಖಾ ಇದೀಗ ತಾಯಿಯಾಗುವ ಖುಷಿಯಲ್ಲಿದ್ದಾರೆ. ಕುಂಕುಮ ಭಾಗ್ಯ ಧಾರಾವಾಹಿಯ ಆಲಿಯಾ ಪಾತ್ರಕ್ಕೆ ನಟಿ ಶಿಖಾ ಸಿಂಗ್ ಜೀವ ತುಂಬಿದ್ದರು. ಈ ಧಾರಾವಾಹಿಯಿಂದಲೇ ಹೆಚ್ಚು ಪ್ರಚಾರ ಪಡೆದಿದ್ದ ಈ ನಟಿಗೆ ಡಬಲ್ ಸಂಭ್ರಮ ಮನೆ ಮಾಡಿದೆ.
ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಈ ನಟಿ ತಾವು ತಾಯಿಯಾಗುತ್ತಿರುವ ಬಗ್ಗೆಯೂ ಖುಷಿ ಹಂಚಿಕೊಂಡಿದ್ದಾರೆ. ತಮ್ಮ ಪತಿಯ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಇವರು ತಾಯಿಯಾಗುತ್ತಿರುವುದನ್ನು ಹೇಳಿದ್ದಾರೆ.