alex Certify ʼಓಂʼ ಸಿನಿಮಾ ಕುರಿತು ಬಹಿರಂಗವಾಯ್ತು ಇಂಟರೆಸ್ಟಿಂಗ್ ವಿಚಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಂʼ ಸಿನಿಮಾ ಕುರಿತು ಬಹಿರಂಗವಾಯ್ತು ಇಂಟರೆಸ್ಟಿಂಗ್ ವಿಚಾರ..!

ʼಓಂʼ ಇಡೀ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಿನಿಮಾ. ಆಗಿನ ಕಾಲದಿಂದ ಇಂದಿನವರೆಗೂ ಅದೇ ಅಸ್ತಿತ್ವ ಉಳಿಸಿಕೊಂಡು ಬಂದ ಸಿನಿಮಾಗಳಲ್ಲಿ ಓಂ ಕೂಡ ಒಂದು.

ಶಿವರಾಜ್ ಕುಮಾರ್ ಹಾಗೂ ಪ್ರೇಮ ನಟನೆಗೆ ಮನಸೋಲದೆ ಇರೋವ್ರು ಇಲ್ಲ. ಉಪೇಂದ್ರ ನಿರ್ದೇಶನವಂತೂ ಅದ್ಭುತ. ಆದರೆ ಈ ಸಿನಿಮಾ ಬಗ್ಗೆ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ.

ಹೌದು, ಉಪ್ಪಿ ಕಾಲೇಜು ದಿನಗಳಲ್ಲಿಯೇ ಓಂ ಸಿನಿಮಾದ ಚಿತ್ರಕಥೆ ಬರೆದಿದ್ದರಂತೆ. ಆಗ ಇನ್ನು ಉಪೇಂದ್ರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಆಗಲೇ ಅವರು ಈ ಸಿನಿಮಾ ಕಥೆ ಬರೆದಿದ್ದರು.

ಆದರೆ, 1989 ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಶಿವ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾ ನೋಡಿದ ಉಪ್ಪಿ ಒಮ್ಮೆ ಶಾಕ್ ಆಗಿದ್ದರಂತೆ.

ಏಕೆಂದರೆ ತಾವು ಬರೆದಿದ್ದ ಓಂ ಸಿನಿಮಾ ಕಥೆಗೂ ಶಿವ ಸಿನಿಮಾದಲ್ಲಿನ ಕೆಲವೊಂದು ದೃಶ್ಯಗಳು, ಎಣೆದ ಕಥೆಯಲ್ಲಿ ಸಾಮ್ಯತೆ ಇತ್ತಂತೆ. ಈ ಘಟನೆ ನಿಜಕ್ಕೂ ಅವರಿಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿತ್ತಂತೆ. ಆದರೆ ಉಪೇಂದ್ರ ತಮ್ಮ ಬುದ್ದಿವಂತಿಕೆ ಉಪಯೋಗಿಸಿ ಇಡೀ ಕಥೆಯನ್ನು ರಿವರ್ಸ್ ಫಾರ್ಮೆಟ್ ನಲ್ಲಿ ಬರೆದಿದ್ದರಂತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...