HomeBeautyಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಪರಿಣಾಮಕಾರಿ ಮದ್ದು

ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಪರಿಣಾಮಕಾರಿ ಮದ್ದು

ಒತ್ತಡ, ಚಿಂತೆ, ಕೆಲಸದೊತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆಯಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಡಾರ್ಕ್ ಸರ್ಕಲ್ ನ್ನು ನಿವಾರಿಸಲು ಅನೇಕ ಮನೆ ಮದ್ದುಗಳಿವೆ. ಅದರ ಜೊತೆಗೆ ಈ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ.

*ಟೊಮೆಟೊ : ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಆರೋಗ್ಯವಾಗಿಡುತ್ತದೆ. ಹಾಗಾಗಿ ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ನಿಂಬೆ ಇವುಗಳನ್ನು ಸೇವಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಸೌತೆಕಾಯಿ : ಇದು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿ. ಇದು ಚರ್ಮವನ್ನು ತಂಪಾಗಿಸುತ್ತದೆ. ಇದು ಚರ್ಮದ ಸ್ಥಿತಿ ಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*ವಿಟಮಿನ್ ಇ : ವಿಟಮಿನ್ ಇ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಕಿಣ್ವ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ವಿಟಮಿನ್ ಇ ಸಮೃದ್ಧವಾಗಿರುವ ಎಳ್ಳು, ವಾಲ್ನಟ್ಸ್, ಬಾದಾಮಿ ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇವಿಸಿ.

*ಹೂಕೋಸು: ಇದರಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದು ರಕ್ತಪರಿಚಲನೆಯನ್ನು ಹೆಚ್ಚಿಸುವುದರ ಮೂಲಕ ಚರ್ಮ ಸಮಸ್ಯೆಯನ್ನು ನಿವಾರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular