HomeLifestyleಸುಲಭವಾಗಿ ಮಾಡಿ ಸಂಡೆ ಸ್ಪೆಷಲ್ ಮೊಟ್ಟೆ ಬೋಂಡಾ

ಸುಲಭವಾಗಿ ಮಾಡಿ ಸಂಡೆ ಸ್ಪೆಷಲ್ ಮೊಟ್ಟೆ ಬೋಂಡಾ

ರಜಾ ದಿನ ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರಿಗೆ ಬಾಯಿ ಚಪ್ಪರಿಸಲು ಏನಾದ್ರೂ ಬೇಕು ಎನ್ನಿಸುತ್ತೆ. ಅಂತವರಿಗೆ ಹೇಳಿ ಮಾಡಿಸಿದ ರೆಸಿಪಿ ಮೊಟ್ಟೆ ಬೋಂಡಾ. ಇದನ್ನು ಮಾಡುವುದು ಸುಲಭ. ಕೇವಲ 10 ನಿಮಿಷದಲ್ಲಿ ಎಗ್ ಬೋಂಡಾ ಸಿದ್ಧವಾಗುತ್ತೆ.

ಎಗ್ ಬೋಂಡಾ ಮಾಡಲು ಬೇಕಾಗುವ ಪದಾರ್ಥ :

ಆರು ಬೇಯಿಸಿದ ಮೊಟ್ಟೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಧ ಚಮಚ ಮೆಣಸಿನ ಪುಡಿ

ಅರ್ಧ ಲೋಟ ಕಡಲೆ ಹಿಟ್ಟು

ಕಾಲು ಚಮಚ ಜೀರಿಗೆ ಪುಡಿ

ಅರ್ಧ ಲೋಟ ಮೊಸರು

ಅರ್ಧ ಲೋಟ ಬಿಸಿ ನೀರು

ಕರಿಯಲು ತುಪ್ಪ

ರುಚಿಗೆ ತಕ್ಕಷ್ಟು ಉಪ್ಪು

ಎಗ್ ಬೋಂಡಾ ಮಾಡುವ ವಿಧಾನ :

ಬೇಯಿಸಿದ ಮೊಟ್ಟೆಯನ್ನು ಬಿಡಿಸಿಕೊಂಡು ಮಧ್ಯ ಕತ್ತರಿಸಿಕೊಳ್ಳಿ. ಅದನ್ನು ಬಿಸಿ ಮಾಡಿದ ತುಪ್ಪದಲ್ಲಿ ಅದ್ದಿ ಮುಚ್ಚಿಡಿ.

ಇನ್ನೊಂದು ಪಾತ್ರೆಗೆ ಕಡಲೆ ಹಿಟ್ಟು, ಬಿಸಿ ನೀರು, ಮೊಸರು ಸೇರಿಸಿ ಕಲಸಿಕೊಳ್ಳಿ. ಅದಕ್ಕೆ ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪನ್ನು ಹಾಕಿ ಕಲಸಿ. ಬಾಣೆಲೆಗೆ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ನಂತ್ರ ಮೊಟ್ಟೆ ಚೂರನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಬಾಣಲೆಗೆ ಬಿಡಿ. ಕೆಂಪಗಾಗುವವರೆಗೆ ಕರಿದು ತೆಗೆಯಿರಿ.

For Latest News Updates, Join Our Whatsapp Community🚩
RELATED ARTICLES

Most Popular