HomeLatest Newsವಿಜಯ್ ಪ್ರಮಾಣ ವಚನಕ್ಕೆ ಸಜ್ಜಾಗುತ್ತಿದ್ದಂತೆ ಅಚ್ಚರಿ ಬೆಳವಣಿಗೆ: ಬದ್ದವೈರಿಗಳಾದ ಡಿಎಂಕೆ -ಎಐಡಿಎಂಕೆ ಸರ್ಕಾರ ರಚನೆಗೆ ರಹಸ್ಯ...

ವಿಜಯ್ ಪ್ರಮಾಣ ವಚನಕ್ಕೆ ಸಜ್ಜಾಗುತ್ತಿದ್ದಂತೆ ಅಚ್ಚರಿ ಬೆಳವಣಿಗೆ: ಬದ್ದವೈರಿಗಳಾದ ಡಿಎಂಕೆ -ಎಐಡಿಎಂಕೆ ಸರ್ಕಾರ ರಚನೆಗೆ ರಹಸ್ಯ ಮಾತುಕತೆ

ಚೆನ್ನೈ: ತಮಿಳುನಾಡು ರಾಜಕೀಯ ಭಾರಿ ಸಂಚಲನವನ್ನೇ ಮೂಡಿಸಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೈತ್ರಿಯ ಕುರಿತಂತೆ ಉಭಯ ಪಕ್ಷಗಳ ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಎಐಎಡಿಎಂಕೆ 47, ಡಿಎಂಕೆ 59 ಸ್ಥಾನಗಳನ್ನು ಗೆದ್ದಿದೆ. ಮಿತ್ರ ಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಸಾಧ್ಯತೆಗಳ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ. ಇಬ್ಬರೂ ಸೇರಿ ಸರ್ಕಾರ ರಚಿಸಲು ಮಾತುಕತೆ ನಡೆಸಿದ್ದಾರೆ. ಡಿಎಂಕೆ ನಾಯಕನ ಜೊತೆಗೆ ಮಾತುಕತೆ ನಡೆಸಲಾಗಿದೆ. ಮೈತ್ರಿಯ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಎಐಎಡಿಎಂಕೆ ನಾಯಕರು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಟಿವಿಕೆ ಸಂಸ್ಥಾಪಕ ವಿಜಯ್ ಪ್ರಮಾಣ ವಚನಕ್ಕೆ ಸಜ್ಜಾಗುತ್ತಿದ್ದಂತೆ ಅಚ್ಚರಿ ಬೆಳವಣಿಗೆ ನಡೆದಿದೆ. ಬದ್ದವೈರಿಗಳಾದ ಡಿಎಂಕೆ -ಎಐಡಿಎಂಕೆ  ಸರ್ಕಾರ ರಚನೆಗೆ ರಹಸ್ಯ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯ್ ಅಧಿಕಾರದ ಆಸೆಯ ನಡುವೆ ಡಿಎಂಕೆ ಬದ್ಧವೈರಿ ಎಐಎಡಿಎಂಕೆ ಜೊತೆ ಕೈಜೋಡಿಸಲಿದೆಯೇ ಎನ್ನುವ ರಹಸ್ಯ ಮಾತುಕತೆಗಳು ಗುಸುಗುಸು ಹುಟ್ಟಿಸಿವೆ. ತಮಿಳುನಾಡಿನಲ್ಲಿ ಮಿತ್ರಪಕ್ಷಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ಸರ್ಕಾರ ರಚಿಸಲು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪರದಾಡುತ್ತಿರುವಾಗ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ದೀರ್ಘಕಾಲದ ಪ್ರತಿಸ್ಪರ್ಧಿ ಎಐಎಡಿಎಂಕೆ ಜೊತೆ ಬ್ಯಾಕ್‌ ಚಾನೆಲ್ ಮಾತುಕತೆಗಳನ್ನು ಪ್ರಾರಂಭಿಸಿದೆ. ಇದು ಸಾಂಪ್ರದಾಯಿಕವಾಗಿ ರಾಜ್ಯದ ರಾಜಕೀಯ ಪೈಪೋಟಿಯನ್ನು ವ್ಯಾಖ್ಯಾನಿಸಿರುವ ಎರಡು ಪಕ್ಷಗಳ ನಡುವಿನ ಅಪರೂಪದ ನಡೆಯಾಗಿದೆ.

ಯಾವುದೇ ಪ್ರಗತಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಚರ್ಚೆಗಳು ನಡೆದಿವೆ ಎಂದು ಎಐಎಡಿಎಂಕೆ ಮೂಲಗಳು ದೃಢಪಡಿಸಿವೆ. ತಮಿಳುನಾಡಿನ ರಾಜಕೀಯದಲ್ಲಿ ಅಭೂತಪೂರ್ವ ಬದಲಾವಣೆಯಾಗಬಹುದಾದ ವಿಷಯದಲ್ಲಿ ಡಿಎಂಕೆ ಕೈಜೋಡಿಸಲು ಸಿದ್ಧವಾಗಿದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

ಸಂಖ್ಯಾಬಲದ ಲೆಕ್ಕಾಚಾರ

ತಮಿಳಗ ವೆಟ್ರಿ ಕಳಗಂ – TVK 108

ದ್ರಾವಿಡ ಮುನ್ನೇತ್ರ ಕಳಗಂ – ಡಿಎಂಕೆ 59

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ – AIDMK 47

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ – INC 5

ಪಟ್ಟಾಲಿ ಮಕ್ಕಳ್ ಕಚ್ಚಿ – PMK 4

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ – IUML 2

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – CPI 2

ವಿದುತಲೈ ಚಿರುತೈಗಲ್ ಕಚ್ಚಿ – VCK 2

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) – ಸಿಪಿಐ(ಎಂ) 2

ಭಾರತೀಯ ಜನತಾ ಪಾರ್ಟಿ – ಬಿಜೆಪಿ 1

ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ – DMDK 1

ಅಮ್ಮ ಮಕ್ಕಳ್ ಮುನ್ನೇತ್ರ ಕಜಗಂ – AMMKMNKZ 1

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular