ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ರೈಲಿನಲ್ಲಿ ಸೀಟಿಗಾಗಿ ಗಲಾಟೆಯ ವೇಳೆ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ರೈಲಿನಲ್ಲಿ ಗಲಾಟೆ ನಡೆದು ಶಿವಕುಮಾರ್ ಮತ್ತು ಕುಮಾರ್ ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿದೆ.
ಆರೋಪಿಗಳು ಪ್ರಯಾಣಿಕರ ಸೀಟಿಗಾಗಿ ನಡುವೆ ಗಲಾಟೆಯಾಗಿದ್ದು, ಈ ವೇಳೆ ಶಿವಕುಮಾರ್ ಏಕೆ ಜಗಳವಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಶಿವಕುಮಾರ್ ಮೇಲೆ ಆರೋಪಿಗಳಾದ ಸುಭಾನ್ ಖುರೇಶಿ, ಶೋಯಬ್, ವಾಸೀಂ ಮುಗಿಬಿದ್ದಿದ್ದಾರೆ.
ಖುರೇಶಿ ಎಂಬಾತ ಮೊದಲಿಗೆ ಶಿವಕುಮಾರ್ ಗೆ ಚಾಕುವಿನಿಂದ ಇರಿದಿದ್ದು, ನಂತರ ಶೋಯಬ್ ಎಂಬಾತನು ಕೂಡ ಚಾಕುವಿನಿಂದ ಇರಿದಿದ್ದಾನೆ. ಪ್ರಾಣ ರಕ್ಷಣೆಗಾಗಿ ಶಿವಕುಮಾರ್ ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಲ್ಲುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ.
ಆರೋಪಿಗಳನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ನಂತರ ಜನರು ಆರೋಪಿಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಆರೋಪಿಗಳನ್ನು ಥಸಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಶಿವಕುಮಾರ್ ಮತ್ತು ಕುಮಾರ್ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

