HomeLatest NewsBIG NEWS: ದಿನೇಶ್ ಅಮೀನಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರು

BIG NEWS: ದಿನೇಶ್ ಅಮೀನಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರು

ಬೆಂಗಳೂರು: ವಿಧಾನ ಪರಿಷತ್ಗೆ ನಾಮನಿರ್ದೇಶನಕ್ಕೆ ರಾಜ್ಯ ಕಾಂಗ್ರೆಸ್ ಶಿಫಾರಸು ಮಾಡಿದ್ದ ದಿನೇಶ್ ಅಮೀನಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ.

ದಿನೇಶ್ ಅಮೀನಮಟ್ಟು ಅವರನ್ನು ಪರಿಷತ್ ಗೆ ನೇಮಕ ಮಾಡಬಾರದು ಎಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಮುಖೇನ ದೂರು ನೀಡಿದ್ದಾರೆ. ದಿನೇಶ್ ಅಮೀನಮಟ್ಟು ಸಿಎಂ ಮಾಧ್ಯಮ ಸಲಹೆಗಾರರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಸಮಾಜ, ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಷತ್ ಗೆ ಅವರನ್ನು ನೇಮಕ ಮಾಡಬಾರದು ಎಂದು ಮನವಿ ಮಾಡಲಾಗಿದೆ.

ಈಗಾಗಲೇ ಪರಿಷತ್ ಗೆ ನಾಮನಿರ್ದೇಶನ ಕುರಿತು ದಿನೇಶ್ ಅಮಿನಮಟ್ಟು ಹೆಸರನ್ನು ಸೂಚಿಸಿ ವರದಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ದಿನೇಶ್ ಅಮೀನಮಟ್ಟು ವಿರುದ್ಧ ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular