HomeLatest Newsಮತ್ತೊದು ಘೋರ ಘಟನೆ: ಪತ್ನಿಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ!

ಮತ್ತೊದು ಘೋರ ಘಟನೆ: ಪತ್ನಿಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ!

ಕಲಬುರಗಿ: ಪತಿ ಮಹಾಶಯನೊಬ್ಬ ಪತ್ನಿ ಮೇಲಿನ ಅನುಮಾನಕ್ಕೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆಗೈದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ನಗರದ ಶಹಬಜಾರ್ ನಲ್ಲಿ ಈ ಘಟನೆ ನಡೆದಿದೆ. ಕಲ್ಲಹಂಗರಾ ಗ್ರಾಮದ ರೂಪಾ (32) ಕೊಲೆಯಾದ ಮಹಿಳೆ. ವೆಂಕಟೇಶ್ ಪತ್ನಿಯನ್ನೇ ಕೊಂದ ಪತಿ. ಹತ್ತು ವರ್ಷಗಳ ಹಿಂದೆ ವೆಂಕಟೇಶ್ ಹಾಗೂ ರೂಪಾ ವಿವಾಹವಾಗಿದೆ. ಕೆಲ ತಿಂಗಳಿಂದ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಇದೇ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿಯ ಹಿಂಸೆ, ವರ್ತನೆ ಬೇಸತ್ತ ಪತ್ನಿ ರೂಪಾ ಮಕ್ಕಳೊಂದಿಗೆ ಶಹಬಾದ್ ನಗರದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಳು. ಜೀವನ ನಿರ್ವಹಣೆಗಾಗಿ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು, ಅಲ್ಲಿಗೂ ಬಂದು ಕಾಟಕೊಡುತ್ತಿದ್ದ ಪತಿ ಮಹಾಶಯ ರೂಪಾ ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ನಡುರಸ್ತೆಯಲ್ಲೇ ಚಾಕುವಿನಿಣ್ದ ಇರಿದು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚೌಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular