HomeLatest News'ಆಧಾರ್ ಕಾರ್ಡ್' ಮನೆಯಲ್ಲೇ ಮರೆತುಬಿಟ್ಟಿದ್ದೀರಾ ? ವಾಟ್ಸಾಪ್ ನಲ್ಲೇ 2 ನಿಮಿಷದಲ್ಲಿ ಡೌನ್‌ಲೋಡ್ ಮಾಡಬಹುದು !

‘ಆಧಾರ್ ಕಾರ್ಡ್’ ಮನೆಯಲ್ಲೇ ಮರೆತುಬಿಟ್ಟಿದ್ದೀರಾ ? ವಾಟ್ಸಾಪ್ ನಲ್ಲೇ 2 ನಿಮಿಷದಲ್ಲಿ ಡೌನ್‌ಲೋಡ್ ಮಾಡಬಹುದು !

ತುರ್ತಾಗಿ ಆಧಾರ್ ಕಾರ್ಡ್ ಅಗತ್ಯವಿದೆಯೇ? ಆದರೆ ನಿಮ್ಮ ಬಳಿ ಕಾರ್ಡ್ ಇಲ್ಲವೇ? ಹಾಗಿದ್ದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ WhatsApp‌ನಿಂದಲೇ ಸುಲಭವಾಗಿ ಈ-ಆಧಾರ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಈ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.

WhatsApp ಮೂಲಕ ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ?

ಮೊದಲು +91-9013151515 ಸಂಖ್ಯೆಯನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕು.
ನಂತರ WhatsApp ತೆರೆದು ಆ ಸಂಖ್ಯೆಗೆ ‘Hi’ ಅಥವಾ ‘ನಮಸ್ತೆ’ ಎಂದು ಮೆಸೇಜ್ ಕಳುಹಿಸಬೇಕು.
ಬಳಿಕ ಕಾಣಿಸುವ ಆಯ್ಕೆಗಳಲ್ಲಿ DigiLocker Services ಆಯ್ಕೆ ಮಾಡಬೇಕು.
ನಿಮ್ಮ DigiLocker ವಿವರಗಳನ್ನು ಬಳಸಿ ಲಾಗಿನ್ ಆಗಬೇಕು.
DigiLocker ಖಾತೆ ಇಲ್ಲದಿದ್ದರೆ, ಮೊದಲು ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಖಾತೆ ಸೃಷ್ಟಿಸಿಕೊಳ್ಳಬೇಕು.
ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಬೇಕು.
ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಬೇಕು.
ಬಳಿಕ DigiLockerನಲ್ಲಿರುವ ನಿಮ್ಮ ದಾಖಲೆಗಳ ಪಟ್ಟಿಯಲ್ಲಿ Aadhaar ಆಯ್ಕೆ ಮಾಡಬೇಕು.
ನಂತರ ನಿಮ್ಮ ಆಧಾರ್ PDF ರೂಪದಲ್ಲಿ ಲಭ್ಯವಾಗುತ್ತದೆ.
ಅದನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯವಿರುವ ಕಡೆ ಬಳಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಏನೇನು ಬೇಕು?

ಈ ಸೇವೆ ಬಳಸಲು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು DigiLocker ಖಾತೆ ಇರಬೇಕು. ಸಂಬಂಧಿತ ದಾಖಲೆ DigiLockerನಲ್ಲಿ ಲಭ್ಯವಿದ್ದರೆ ಮಾತ್ರ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯ.WhatsApp ಮೂಲಕ ಒಂದೇ ಬಾರಿಗೆ ಒಂದು ದಾಖಲೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಧಾರ್ ಜೊತೆಗೆ PAN ಕಾರ್ಡ್‌ನಂತಹ ಹಲವು ದಾಖಲೆಗಳನ್ನು ಒಂದೇ ಸಮಯದಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ UIDAI ವೆಬ್‌ಸೈಟ್ ಅಥವಾ ಆಧಾರ್ ಆ್ಯಪ್ ಮೂಲಕ ಈ-ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಲಾಗುತ್ತದೆ. ಆದರೆ ಈ ವಿಧಾನದಲ್ಲಿ WhatsApp ಮೂಲಕವೇ ಸುಲಭವಾಗಿ ಈ-ಆಧಾರ್ ಪಡೆಯಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular