ಚಿತ್ರರಂಗ ಕಂಡ ಅದ್ಭುತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಅವರ ಜೀವನ ಆಧಾರಿತ ‘ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿ’ ಪುಸ್ತಕದ ಮುಖಪುಟವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕವನ್ನು ಧೀರಜ್ ಯು. ಕುಮಾರ್ ಅವರು ಬರೆದಿದ್ದು, ವೆಸ್ಟ್‌ಲ್ಯಾಂಡ್ ಬುಕ್ಸ್ ಸಂಸ್ಥೆಯು ಪ್ರಕಟಿಸುತ್ತಿದೆ.
ಪುಸ್ತಕದ ಮುಖಪುಟವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಶ್ರೀದೇವಿ ಅವರ ಮೇಲಿದ್ದ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಮುಖಪುಟದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಶಂಸೆಯ ನುಡಿಗಳಿದ್ದು, ಶ್ರೀದೇವಿ ಅವರನ್ನು ಅಪಾರ ಪ್ರತಿಭೆಯ ಸಂಕೇತ ಎಂದು ಕರೆದಿದ್ದಾರೆ. ಪ್ರಿಯಾಂಕಾ ಹಂಚಿಕೊಂಡ ಈ ಪೋಸ್ಟ್ ಅನ್ನು ಶ್ರೀದೇವಿ ಅವರ ಪತಿ ಬೋನಿ ಕಪೂರ್ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮರುಹಂಚಿಕೊಂಡಿದ್ದಾರೆ.
ಶ್ರೀದೇವಿ ಅವರ ಸಿನಿ ಪಯಣ, ವೈಯಕ್ತಿಕ ಜೀವನ ಮತ್ತು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಈ ಜೀವನಚರಿತ್ರೆಯಲ್ಲಿ ವಿವರವಾಗಿ ಕಟ್ಟಿಕೊಡಲಾಗಿದೆ. ನಾಲ್ಕರ ಹರೆಯದಲ್ಲೇ ‘ಕಂದನ್ ಕರುಣೈ’ ಎಂಬ ತಮಿಳು ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ, 1972ರಲ್ಲಿ ‘ರಾಣಿ ಮೇರಾ ನಾಮ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಹೆಜ್ಜೆ ಇಟ್ಟರು. 80 ಮತ್ತು 90ರ ದಶಕದಲ್ಲಿ ಭಾರತೀಯ ಚಿತ್ರರಂಗದ ಯಶಸ್ವಿ ನಟಿಯಾಗಿ ಮೆರೆದ ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2018ರಲ್ಲಿ ದುಬೈನಲ್ಲಿ ಅವರು ಆಕಸ್ಮಿಕವಾಗಿ ನಿಧನರಾದರು. ಅವರ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕೂಡ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
The one and only. You are so missed. Happy heavenly birthday #Sridevi #Empress… coming soon 🫶🏼@BoneyKapoor @SrideviMemoir @AuthorDhiraj @WestlandBooks pic.twitter.com/YQeYDgsWmF
— PRIYANKA (@priyankachopra) August 13, 2026

