HomeHealthಮಧುಮೇಹಿಗಳು ಸೇವಿಸಬಹುದು ಈ ತರಕಾರಿ

ಮಧುಮೇಹಿಗಳು ಸೇವಿಸಬಹುದು ಈ ತರಕಾರಿ

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಕಾರಣ ಅವರು ತಮ್ಮ ಆಹಾರ ಕ್ರಮಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇವರು ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸಬಾರದು. ಯಾಕೆಂದರೆ ಇದು ದೇಹದಲ್ಲಿ ಗ್ಲೂಕೋಸ್ ಆಗಿ ಪರಿವರ್ತನೆ ಹೊಂದುತ್ತದೆ. ಹಾಗಾಗಿ ಮಧುಮೇಹಿಗಳು ಈ ತರಕಾರಿಗಳನ್ನು ಸೇವಿಸಬಹುದು.

*ಆಲೂಗಡ್ಡೆ ; ಇದು ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದು. ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯಲ್ಲಿ 37 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ 1.7ಗ್ರಾಂ ಸಕ್ಕರೆ ಇರುತ್ತದೆ. ಆದರೆ ಇದನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಹೆಚ್ಚು ಸೇವಿಸಿದರೆ ಸಮಸ್ಯೆಯಾಗುವ ಸಾಧ್ಯತೆಯೂ ಇರುತ್ತದೆ.

*ಕುಂಬಳಕಾಯಿ : ವಿಟಮಿನ್ ಎ ಮತ್ತು ಡಿ ಸಮೃದ್ಧವಾಗಿದೆ. ಇದರಲ್ಲಿ 8ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 3.2 ಗ್ರಾಂ ಸಕ್ಕರೆ ಇರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬಟಾಣಿ : ಬಟಾಣಿ ಕಪ್ ನಲ್ಲಿ 21ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 8 ಗ್ರಾಂ ಸಕ್ಕರೆ ಇರುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಒಳ್ಳೆಯದು.

*ಸಿಹಿ ಆಲೂಗಡ್ಡೆ : ಇದರಲ್ಲಿ 27ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 6ಗ್ರಾಂ ಸಕ್ಕರೆ ಇರುತ್ತದೆ. ಇದನ್ನು ಸಹ ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಸೂಕ್ತ.

For Latest News Updates, Join Our Whatsapp Community🚩
RELATED ARTICLES

Most Popular