HomeEntertainmentಎಲ್ ಪಿಜಿ ಗ್ಯಾಸ್ ಅಭಾವ: ಕಂಗೆಟ್ಟಿರುವ ಆಟೋ ಚಾಲಕರಿಗೆ 25 ಲಕ್ಷ ನೆರವು ನೀಡಿದ ಧ್ರುವ...

ಎಲ್ ಪಿಜಿ ಗ್ಯಾಸ್ ಅಭಾವ: ಕಂಗೆಟ್ಟಿರುವ ಆಟೋ ಚಾಲಕರಿಗೆ 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ

ಬೆಂಗಳೂರು: ಎಲ್ ಪಿಜಿ ಸಿಲಿಂಡರ್ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಟೋ ಚಾಲಕರು ಎಲ್ ಪಿಜಿ ಗ್ಯಾಸ್ ಸಿಗದೇ ಸಂಕಷ್ಟಕ್ಕೀಡಾಗಿದ್ದು, ಬದುಕು ದುಸ್ಥರವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಗ್ಯಾಸ್ ಸಿಗದೇ ಕಂಗೆಟ್ಟಿರುವ ಆತೊ ಚಾಲಕರಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೆರವು ನೀಡಿದ್ದಾರೆ.

ಎಲ್ ಪಿಜಿ ಗ್ಯಾಸ್ ಸಿಗದೇ ದುಡಿಮೆ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಆಟೋ ಚಲಕರಿಗೆ ನಟ ಧ್ರುವ ಸರ್ಜಾ 25 ಲಕ್ಷ ರೂ ಆರ್ಥಿಕ ನೆರವು ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಮಾತನಡಿರುವ ನಟ ಧ್ರುವ ಸರ್ಜಾ, ಆಟೋ ಚಾಲಕರು ದೇಶದ ಬೆನ್ನೆಲುಬು. ಅವರು ದಿನವೂ ದುಡಿಯುವುದು ತಮ್ಮ ಕುಟುಂಬಕ್ಕೆ ಮಾತ್ರವಲ್ಲ. ಸಾರ್ವಜನಿಕವಾಗಿಯೂ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಇಂದು ತಮ್ಮ ಕುಟುಂಬ ಸಾಕುವುದಕ್ಕೂ ಸ<ಕಷ್ಟದ ಸ್ಥಿತಿಯಲ್ಲಿದ್ದಾರೆ. ಎಲ್ಲಿಯೂ ಎಲ್ ಪಿಜಿ ಗ್ಯಾಸ್ ಸಿಗುತ್ತಿಲ್ಲ. ಎಲ್ಲಾ ಕಡೆ ಆಟೋ ಗಳು ನಿಂತು ಹೋಗಿವೆ. ಗ್ಯಾಸ್ ಸಿಕ್ಕಿದರೂ ಒಂದಕ್ಕೆ ಡಬಲ್ ರೇಟ್. ಹೀಗಿರುವಾಗ ಅವರು ಹೇಗೆ ಗ್ಯಾಸ್ ಹಾಕಿಸಿ, ಡ್ಯೂಟಿ ಮಾಡಿ ಹೆಂಡತಿ ಮಕ್ಕಳನ್ನು ಸಾಕುತ್ತಾರೆ? ಹಾಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ನನ್ನದೊಂದು ಮನವಿ. ನಾವು ಆ ಪಕ್ಷ ಈ ಪಕ್ಷ ಅಂತಾ ಮಾತನಾಡುವುದು ಬೇಡ. ನೀವು ಹಿರಿಯರಿದ್ದೀರಿ. ತಿಳಿದಿದ್ದೀರಿ. ಎಲ್ ಪಿಜಿ ಗ್ಯಾಸ್ ಸಮಸ್ಯೆ ಆದಷ್ಟು ಬೇಗ ಬಗೆಹರಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular