ಬೇಸಿಗೆಯ ಬಿಸಿ ನೆತ್ತಿ ಸುಡುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗಿದೆ. ಆದ್ದರಿಂದ ವಾಹನ ಸವಾರರು ಸಿಗ್ನಲ್‌ಗಳಲ್ಲಿ ಕಾಯುವುದು ತ್ರಾಸದಾಯಕವಾಗಿದೆ. ಕೊಪ್ಪಳದಲ್ಲಿಯೂ ಬಿಸಿಲ ಧಗೆ ಜೋರಾಗಿದ್ದು, ವಾಹನ ಸವಾರರ ಅನುಕೂಲಕ್ಕಾಗಿ ನಗರಸಭೆಗೆ ಪತ್ರವನ್ನು ಬರೆಯಲಾಗಿದೆ.
ಸೋಮನಗೌಡ ಹೊಗರನಾಳ ಅಧ್ಯಕ್ಷರು, ಜೆಡಿಎಸ್ ನಗರ ಘಟಕ, ಕೊಪ್ಪಳ ಈ ಕುರಿತು ಪತ್ರವನ್ನು ಬರೆದಿದ್ದು, ಕೊಪ್ಪಳ ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ‘ನೆರಳಿನ ಪರದೆ’ ಅಳವಡಿಕೆಗೆ ಒತ್ತಾಯಿಸಿದ್ದಾರೆ.
ಬಿಸಿಲ ನಾಡು ಕೊಪ್ಪಳದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದೆ. ಸಿಗ್ನಲ್‌ಗಳಲ್ಲಿ ವಾಹನ ಸವಾರರು ಮತ್ತು ಬಸ್‌ಗಾಗಿ ಕಾಯುವ ಪ್ರಯಾಣಿಕರು ಸುಡುವ ಬಿಸಿಲಿನಲ್ಲಿ ನಿಲ್ಲುವುದು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ದಿನಾಂಕ 24.03.2025ರಂದು ನಮ್ಮ ಮನವಿಯ ಮೇರೆಗೆ ಅಳವಡಿಸಲಾಗಿದ್ದ ನೆರಳಿನ ಪರದೆಗಳು ಧನ್ಯವಾದಗಳು. ಆಗ ಪರದೆಗಳು ಈಗ ಹರಿದು ಹೋಗಿದ್ದು, 2026-27ನೇ ಸಾಲಿನ ಬೇಸಿಗೆಯ ಕಠಿಣ ದಿನಗಳು ಪ್ರಾರಂಭವಾಗುವ ಮೊದಲೇ ಹೊಸ ಪರದೆಗಳನ್ನು ಅಳವಡಿಸಬೇಕು ಎಂದು ನಮ್ಮ ನಾಯಕರಾದ ಸನ್ಮಾನ್ಯ ಸಿವಿ ಚಂದ್ರಶೇಖರ ಮತ್ತು ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಇವರ ನಿರ್ದೇಶನದ ಮೇರೆಗೆ ಜೆಡಿಎಸ್ ನಗರ ಘಟಕದ ವತಿಯಿಂದ ಮಾನ್ಯ ನಗರಸಭೆ ಅಧಿಕಾರಿಗಳಿಗೆ ಮನವಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪ್ರಮುಖ ಬೇಡಿಕೆಗಳು
- ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕನಿಷ್ಠ 100 ಮೀಟರ್ ಉದ್ದದ ನೆರಳಿನ ಪರದೆ ಅಳವಡಿಕೆ.
- ಟ್ರಾಫಿಕ್ ಸಿಗ್ನಲ್‌ನಲ್ಲಿ ಗರ್ಭಿಣಿ ತಾಯಂದಿರು ನಡೆದಾಡುವ ರಕ್ಷಣೆ ಮಾಡಿದ ಹಾಗೆ ಆಗುತ್ತದೆ.
- ನೆರಳಿನ ಪರದೆ ಹಾಕುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಿಸಲಿನ ತಾಪ ಕಡಿಮೆ ಮಾಡಿದ ಹಾಗೆ ಆಗುತ್ತದೆ. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತದೆ.
- ದ್ವಿಚಕ್ರ ವಾಹನ ಸವಾರರ ಮತ್ತು ಬಸ್‌ಗಾಗಿ ಕಾಯುವ ಪ್ರಯಾಣಿಕರ ಹಿತರಕ್ಷಣೆ.
- ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಸೇವೆ ಮಾಡುವ ಪೊಲೀಸ್ ಸಿಬ್ಬಂದಿಗಳಿಗೆ ಅನುಕೂಲವಾಗುತ್ತದೆ.
ಆದ್ದರಿಂದ ಸಾರ್ವಜನಿಕರ ಆರೋಗ್ಯ ಮತ್ತು ಹಿತದೃಷ್ಟಿಯೇ ನಮ್ಮ ಮೊದಲ ಆದ್ಯತೆ. ಸರ್ಕಾರ ಮತ್ತು ನಗರಸಭೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಆಶಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

