ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಒಂದು ಕಡೆಯಾದರೆ ಸರಿಯಾದ ಮನೆ ಹುಡುಕುವುದು ಮತ್ತೊಂದು ದೊಡ್ಡ ಸವಾಲು. ಬ್ರೋಕರ್‌ಗಳ ಕಾಟ, ಅಡ್ವಾನ್ಸ್ ಕಿರಿಕಿರಿ ನಡುವೆ ಸುಸ್ತಾಗುವ ಜನರಿಗೆ ಈಗ ಇಲ್ಲೊಬ್ಬ ಯುವಕ ಹೊಸ ದಾರಿ ತೋರಿಸಿದ್ದಾರೆ. ಅದುವೇ AI ಹೌಸ್ ಹಂಟಿಂಗ್
ಬೆಂಗಳೂರಿನ ಸುನಲ್ ಸೂದ್ ಎಂಬುವವರು ತಾವು ಮನೆ ಹುಡುಕಲು ಪಟ್ಟ ಕಷ್ಟಕ್ಕೆ ಕೃತಕ ಬುದ್ಧಿಮತ್ತೆ (AI) ಮೂಲಕ ಹೇಗೆ ಪರಿಹಾರ ಕಂಡುಕೊಂಡರು ಎಂಬುದನ್ನು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಸ್ಮಾರ್ಟ್ ಐಡಿಯಾ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌಸ್ ಹಂಟಿಂಗ್‌ಗೆ AI ಕೆಲಸಗಾರ: ಸುನಲ್ ಅವರ ಮಾಸ್ಟರ್ ಪ್ಲಾನ್ ಇಲ್ಲಿದೆ
ಸುನಲ್ ಅವರು ಕೇವಲ ಒಂದು ಎಐ ಟೂಲ್ ಬಳಸಿಕೊಂಡು ಹೇಗೆ ಮನೆ ಫೈನಲ್ ಮಾಡಿದರು ಎಂಬ ಹಂತಗಳು ಇಲ್ಲಿವೆ:
ಗ್ರೂಪ್‌ಗಳ ಸ್ಕ್ಯಾನಿಂಗ್: ಮೊದಲು ಫೇಸ್‌ಬುಕ್‌ನಲ್ಲಿರುವ ಹತ್ತಾರು ‘Flat and Flatmates’ ಗ್ರೂಪ್‌ಗಳನ್ನು ಓಪನ್ ಮಾಡಿಕೊಂಡರು. ಸಾವಿರಾರು ಪೋಸ್ಟ್‌ಗಳನ್ನು ಮನುಷ್ಯರು ಓದೋದು ಕಷ್ಟ ಅಲ್ವಾ? ಇಲ್ಲಿಗೇ ಎಂಟ್ರಿ ಕೊಟ್ಟಿದ್ದು ಎಐ!
Comet AI ಮ್ಯಾಜಿಕ್: Comet ಎಂಬ ಎಐ ಟೂಲ್‌ಗೆ ತಮಗೆ ಯಾವ ಏರಿಯಾ ಬೇಕು, ಎಂತಹ ಮನೆ ಬೇಕು ಎಂಬ ಸ್ಪಷ್ಟ ಸೂಚನೆ (Prompt) ನೀಡಿದರು.
ಬ್ರೋಕರ್‌ಗಳಿಗೆ ನೋ ಎಂಟ್ರಿ: ಈ ಎಐ ಸಿಸ್ಟಮ್ ಹಳೆಯ ಮತ್ತು ಹೊಸ ಪೋಸ್ಟ್‌ಗಳನ್ನು ಜಾಲಾಡಿ, ಕೇವಲ No Brokerage ಪೋಸ್ಟ್‌ಗಳನ್ನು ಮಾತ್ರ ಆಯ್ದುಕೊಂಡಿತು. ಅಷ್ಟೇ ಅಲ್ಲ, ಫೇಕ್ ಪೋಸ್ಟ್‌ಗಳು ಮತ್ತು ಜಾಹೀರಾತುಗಳನ್ನು ಕಸದ ಬುಟ್ಟಿಗೆ ಹಾಕಿತು
ಆಫೀಸ್‌ಗೆ ಎಷ್ಟು ದೂರ?: ಮನೆಯಿಂದ ಆಫೀಸ್‌ಗೆ ಎಷ್ಟು ಟ್ರಾವೆಲ್ ಟೈಮ್ ಆಗುತ್ತದೆ ಎಂಬುದನ್ನು ಕೂಡ ಎಐ ಲೆಕ್ಕ ಹಾಕಿ, ಟ್ಯಾಪ್ ಮಾಡಬಹುದಾದ ಲಿಂಕ್‌ಗಳ ಜೊತೆಗೆ ನೀಟಾಗಿ ಸಾರಾಂಶ ರೆಡಿ ಮಾಡಿ ಕೊಟ್ಟಿತು.
ಕೇವಲ 4 ವಿಸಿಟ್, ಒಂದು ಮನೆ ಫೈನಲ್
ಸುನಲ್ ಅವರ ಈ ಎಐ ಪ್ರಯೋಗದ ರಿಸಲ್ಟ್ ಹೀಗಿದೆ:
ಒಟ್ಟು ಲೀಡ್‌ಗಳು: 20 (ಸಾವಿರಾರು ಪೋಸ್ಟ್‌ಗಳಿಂದ ಆರಿಸಿದ್ದು)
ಮನೆ ವೀಕ್ಷಣೆ (Visits): 4
ಫೈನಲ್ ಆದ ಮನೆ: 1
ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು ಪೂರ್ಣಾವಧಿ ಕೆಲಸದಂತೆ, ಅದಕ್ಕಾಗಿಯೇ ನಾನು ಎಐ ಅನ್ನು ಕೆಲಸಕ್ಕೆ ಇಟ್ಟುಕೊಂಡೆ” ಎಂದು ಸುನಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದು ಅಲ್ವಾ ಎಐ ಅಂದ್ರೆ – ಫಿದಾ ಆದ ನೆಟ್ಟಿಗರು
ಸುನಲ್ ಅವರ ಈ ಪೋಸ್ಟ್ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.
ಎಐನ ಅತ್ಯುತ್ತಮ ಬಳಕೆ ಅಂದ್ರೆ ಇದೇ ನೋಡಿ,” ಎಂದು ಒಬ್ಬರು ಕಮೆಂಟ್ ಮಾಡಿದರೆ,
ಮತ್ತೊಬ್ಬರು ಬೆಂಗಳೂರು ಮಂದಿಗೆ ಇದೊಂದು ವರದಾನ” ಎಂದಿದ್ದಾರೆ.
ಇನ್ನೂ ಕೆಲವರು ಇವರ ಹೊಸ ಮನೆಗೆ ‘ಆಲ್ ದಿ ಬೆಸ್ಟ್’ ಹೇಳುತ್ತಿದ್ದಾರೆ.ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ದೈನಂದಿನ ಕಷ್ಟಗಳನ್ನು ಹೇಗೆ ಸುಲಭ ಮಾಡಿಕೊಳ್ಳಬಹುದು ಎಂಬುದಕ್ಕೆ ಸುನಲ್ ಸೂದ್ ಅವರೇ ಸಾಕ್ಷಿ.

