ನವದೆಹಲಿ: ಕೋತಿಯನ್ನು ನೇಣು ಬಿಗಿದು ಸಾಯಿಸಿದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಶೆರ್ ಜೇಸುದಾಸ್ ಎಂಬ ಟ್ವಿಟರ್ ಬಳಕೆದಾರರು ಈ ಆಘಾತಕಾರಿ ವಿಡಿಯೋವನ್ನು ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಕೋತಿಯನ್ನು ಮರಕ್ಕೆ ಕಟ್ಟಿಹಾಕಿ ನೇಣು ಬಿಗಿದು ಸಾಯಿಸುವುದನ್ನು ನೋಡಬಹುದು. ಜೀವಂತ ಕೋತಿಯನ್ನೇ ನೇಣು ಹಾಕಿರುವುದಕ್ಕೆ ಸಾಕ್ಷಿಯಾದದ್ದು ಈ ಕೋತಿಯ ನಾಲಿಗೆ ಹೊರಕ್ಕೆ ಚಾಚಿರುವುದು.
ವರದಿಯ ಪ್ರಕಾರ, ಇದು ದೆಹಲಿಯ ಸರೈ ರೋಹಿಲಾ ಪ್ರದೇಶದಲ್ಲಿ ಸಂಭವಿಸಿದೆ ಮತ್ತು ಫ್ರಾನ್ಸ್ ಮೂಲದ ಪತ್ರಕರ್ತರು ಜಿ20 ಶೃಂಗಸಭೆಯ ಅಧಿವೇಶನಗಳಿಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಗಮನಕ್ಕೆ ಈ ಘಟನೆ ಬಂದಿದೆ.
ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಪ್ಪಿತಸ್ಥರಿಗಾಗಿ ಹುಡುಕಾಟ ನಡೆಸಿದ್ದಾರೆ.
This just happened in the Sarai Rohila thana police station.
Request @DelhiPolice & @CPDelhi to ensure proper procedure is followed. Send the rope for forensics, so the culprit is identified.@FranceinIndia Your journalists are complicit with mercenaries and murderers as these pic.twitter.com/GfnXUYmfRA
— Dr. Asher R. Jesudoss (@JesudossAsher) February 23, 2023

