HomeKarnatakaಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುವಾಗ ಸಚಿವರ ಮಾತಿನ ಅಗತ್ಯ ಏನಿದೆ? ಆರ್.ಅಶೋಕ್ ಪ್ರಶ್ನೆ

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುವಾಗ ಸಚಿವರ ಮಾತಿನ ಅಗತ್ಯ ಏನಿದೆ? ಆರ್.ಅಶೋಕ್ ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುವಾಗ ಸಚಿವರ ಮಾತಿನ ಅಗತ್ಯ ಏನಿದೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಆರ್.ಅಶೋಕ್, ಮೈಸೂರಿನಲ್ಲಿ ವಿನೂತನವಾದ ದೇಶದ ಮೊದಲ ಡೋಮ್‌ ತಾರಾಲಯವನ್ನು ಕೇಂದ್ರ ಸರ್ಕಾರ ಕೊಡುಗೆಯಾಗಿ ನೀಡಿದೆ. ಹಿಂದಿನ ಯುಪಿಎ ಅವಧಿಗಿಂತಲೂ ಅಧಿಕ ಅನುದಾನ ರಾಜ್ಯಕ್ಕೆ ಬಂದಿದೆ. ಬಡತನ ಬಹಳಷ್ಟು ಕಡಿಮೆಯಾಗಿದೆ. ಸರ್ಕಾರದಲ್ಲಿ ಸ್ಥಿರತೆ ಇರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಬಂದು ಹೂಡಿಕೆ ಮಾಡಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಬಂದು ಇವುಗಳನ್ನು ಉದ್ಘಾಟನೆ ಮಾಡುವುದರಿಂದ ಜನರಿಗೆ ಸಂತಸವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆ ಹೆಚ್ಚು ಸ್ಥಾನಗಳನ್ನು ರಾಜ್ಯದ ಜನರು ನೀಡಿದ್ದಾರೆ. ಮುಂದಿನ ಜಿಬಿಎ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಸಾವಿರಾರು ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದು, ಇದರಿಂದ ಬೆಂಗಳೂರಿಗೆ ಜನತೆಗೆ ಸಂತಸವಾಗಿದೆ. ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳಿಂದಾಗಿ ಮುಂದಿನ ಜಿಬಿಎ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಬಂದಾಗ ವೇದಿಕೆಯಲ್ಲಿ ಮಾತಾಡಲು ಅವಕಾಶ ಸಿಗಲಿಲ್ಲ ಎಂದು ನಾವೇನೂ ಕಣ್ಣೀರು ಹಾಕಿಲ್ಲ. ಹಿಂದೆ ನನಗೆ ವೇದಿಕೆ ಮೇಲೆ ಹೋಗುವ ಅವಕಾಶ ಸಿಕ್ಕಿತ್ತು. ಈಗ ಸಿಕ್ಕಿಲ್ಲ. ಶಿಷ್ಟಾಚಾರ ಇರುವುದರಿಂದ ನಿಯಮ ಪಾಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸಚಿವ ಕೃಷ್ಣ ಬೈರೇಗೌಡರಿಗಿಂತಲೂ ಚೆನ್ನಾಗಿ ಮಾತಾಡುತ್ತಾರೆ. ಅವರು ಕರ್ನಾಟಕದ ಮುಖ್ಯಮಂತ್ರಿಯೇ ಹೊರತು ಪಾಕಿಸ್ತಾನದ ಮುಖ್ಯಮಂತ್ರಿ ಅಲ್ಲ. ಅವರು ಮಾತಾಡುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ ಎಂದು ಟಾಂಗ್ ನೀಡಿದರು.

ಮುಖ್ಯಮಂತ್ರಿಯವರೇ ವೇದಿಕೆಯಲ್ಲಿ ಮಾತಾಡುವುದರಿಂದ ಸಚಿವರಿಗೆ ವಿಶೇಷವಾಗಿ ಮಾತಾಡಲು ಏನೂ ವಿಷಯಗಳಿರುವುದಿಲ್ಲ. ಸಚಿವರಿಗೆ ಏನಾದರೂ ಕೇಳಬೇಕೆಂದರೆ ದೆಹಲಿಗೆ ಹೋಗಿ ಮನವಿ ಮಾಡಲಿ. ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಇದ್ದಾಗ ಸಚಿವರ ಬಳಿ ಹೋಗಿ ಮನವಿ ಸಲ್ಲಿಸುತ್ತೇವೆ. ಬೇಡಿಕೆ, ಅಹವಾಲುಗಳನ್ನು ಭಾಷಣದಲ್ಲಿ ಹೇಳಿದರೆ, ಅದು ಜನರ ಮುಂದೆ ಮಾಡುವ ಶೋ ಆಗುತ್ತದೆ. ಸಚಿವರು ತಮ್ಮನ್ನು ಪ್ರಚಾರ ಮಾಡಿಕೊಳ್ಳಲು ಈ ರೀತಿ ಮಾತಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೆಟ್ರೊ ಯೋಜನೆಯಲ್ಲಿ ಶೇ.20 ರಾಜ್ಯ ಸರ್ಕಾರ ಹಾಗೂ ಶೇ.20 ಕೇಂದ್ರ ಸರ್ಕಾರ ಪಾಲು ಹೊಂದಿದೆ. ಉಳಿದಿದ್ದನ್ನು ಬಿಎಂಆರ್‌ಸಿಎಲ್‌ ಸಾಲದ ಮೂಲಕ ಹೊಂದಿಕೆ ಮಾಡುತ್ತದೆ. ಶೇ.80 ರಷ್ಟು ಪಾಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಬಜೆಟ್‌ನಲ್ಲಿ ತೋರಿಸಬೇಕಿತ್ತು. ಕಾಂಗ್ರೆಸ್‌ ನಾಯಕರು ಈ ಬೋಗಸ್‌ ಲೆಕ್ಕಗಳನ್ನು ನೀಡುವುದನ್ನು ಬಿಟ್ಟು, ಕೇಂದ್ರದ ಜೊತೆ ಉತ್ತಮ ಸಂಬಂಧ ಹೊಂದಿ ಹೆಚ್ಚು ಅನುದಾನ ತರುವುದಕ್ಕೆ ಗಮನಹರಿಸಲಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular