HomeKarnatakaಪ್ರಶಾಂತಿ ಕುಟೀರದಲ್ಲಿ ವರನಟ ಡಾ. ರಾಜ್ ಸ್ಮರಿಸಿದ ಪ್ರಧಾನಿ ಮೋದಿ.! ಹೇಳಿದ್ದೇನು..?

ಪ್ರಶಾಂತಿ ಕುಟೀರದಲ್ಲಿ ವರನಟ ಡಾ. ರಾಜ್ ಸ್ಮರಿಸಿದ ಪ್ರಧಾನಿ ಮೋದಿ.! ಹೇಳಿದ್ದೇನು..?

ಬೆಂಗಳೂರು: ಕನ್ನಡಿಗರ ಆರಾಧ್ಯ ದೈವ, ವರನಟ ಡಾ. ರಾಜ್‌ಕುಮಾರ್‌ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಮರಿಸಿದ್ದಾರೆ. ಯೋಗದ ಮಹತ್ವದ ಕುರಿತು ಮಾತನಾಡುವ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್‌ ಅವರ ಯೋಗಾಭ್ಯಾಸವನ್ನು ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಈ ಮಾತು ಕನ್ನಡಿಗರ ಗಮನ ಸೆಳೆದಿದೆ.

ಬೆಂಗಳೂರಿನ ಆನೇಕಲ್ ಸಮೀಪದಲ್ಲಿರುವ ಪ್ರಶಾಂತಿ ಕುಟೀರದಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕವು ಪುರಾತನ ಕಾಲದಿಂದಲೂ ಯೋಗದ ಪ್ರಮುಖ ಕೇಂದ್ರವಾಗಿದೆ ಎಂದು ಬಣ್ಣಿಸಿದರು.

ಡಾ. ರಾಜ್‌ಕುಮಾರ್‌ ಅವರ ಯೋಗಾಭ್ಯಾಸವನ್ನು ಸ್ಮರಿಸಿದ ಮೋದಿ

ಕರ್ನಾಟಕದ ಯೋಗ ಪರಂಪರೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದ ಹೆಮ್ಮೆಯ ನಟ ಡಾ. ರಾಜ್‌ಕುಮಾರ್‌ ಅವರನ್ನೂ ಸ್ಮರಿಸಿದರು. ಡಾ. ರಾಜ್‌ಕುಮಾರ್‌ ಅವರು ಯೋಗಾಭ್ಯಾಸದಿಂದಲೂ ಪ್ರಸಿದ್ಧರಾಗಿದ್ದರು ಎಂದು ಉಲ್ಲೇಖಿಸಿದರು.ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ವರನಟನ ಯೋಗದ ಬಗೆಗಿನ ಆಸಕ್ತಿ ಮತ್ತು ಶಿಸ್ತನ್ನು ಪ್ರಧಾನಿ ಪ್ರಸ್ತಾಪಿಸಿರುವುದು ವಿಶೇಷವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಯೋಗದ ನೆಲೆವೀಡು

ಕರ್ನಾಟಕದ ಭೂಮಿ ಯೋಗದ ಪರಂಪರೆಯನ್ನು ಸಮೃದ್ಧಗೊಳಿಸಿದೆ. ಅನೇಕ ಆಚಾರ್ಯರು ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇಂತಹ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಪ್ರಶಾಂತಿ ಕುಟೀರದಂತಹ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.

ಪ್ರಶಾಂತಿ ಕುಟೀರಕ್ಕೆ 50 ವರ್ಷಗಳ ಸಂಭ್ರಮ

1975ರಲ್ಲಿ ಸ್ಥಾಪನೆಯಾದ ಪ್ರಶಾಂತಿ ಕುಟೀರವು ಯೋಗ, ಶಿಕ್ಷಣ, ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಕ್ಷೇತ್ರಗಳಲ್ಲಿ ಐದು ದಶಕಗಳ ಸೇವೆಯನ್ನು ಪೂರ್ಣಗೊಳಿಸಿದೆ. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ (S-VYASA) ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ಆಡಳಿತಾತ್ಮಕ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕೇರಳದ ತಿರುವನಂತಪುರಂನಲ್ಲಿರುವ ಎಸ್-ವ್ಯಾಸದ ನೂತನ ಕ್ಯಾಂಪಸ್‌ಗೂ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲೆ ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular