HomeEntertainmentಮೊಣಕಾಲ ಕೆಳಗೆ ಪ್ಯಾಂಟ್​ ತೊಟ್ಟು ಕ್ಯಾಟ್ ​ವಾಕ್....! ಹೀಗೊಂದು ಫ್ಯಾಷನ್​ ಷೋ

ಮೊಣಕಾಲ ಕೆಳಗೆ ಪ್ಯಾಂಟ್​ ತೊಟ್ಟು ಕ್ಯಾಟ್ ​ವಾಕ್….! ಹೀಗೊಂದು ಫ್ಯಾಷನ್​ ಷೋ

ಫ್ಯಾಷನ್​ ಎನ್ನುವುದು ಇವತ್ತಿನ ದಿನಗಳಲ್ಲಿ ವಿಚಿತ್ರ ರೂಪ ಪಡೆಯುತ್ತಿದೆ. ಪ್ಯಾಂಟ್​ ರಹಿತವಾಗಿ ಕ್ಯಾಟ್​ವಾಕ್​ ಮಾಡುವುದನ್ನು ನೋಡಿರುವಿರಿ. ಇನ್ನು ಕೆಲವು ಕಡೆಗಳಲ್ಲಿ ಲಲನೆಯರು ಹಾಕುವ ಡ್ರೆಸ್​ಗಳ ಬಗ್ಗೆಯಂತೂ ಹೇಳುವುದೇ ಬೇಡ. ಇದು ಫ್ಯಾಷನ್ನೋ, ಸಂಪೂರ್ಣ ದೇಹ ಪ್ರದರ್ಶನದ ಕಾರ್ಯಕ್ರಮವೋ ಎಂದು ತಿಳಿಯದಷ್ಟು ರೀತಿಯಲ್ಲಿ ಫ್ಯಾಷನ್​ ಷೋಗಳು ನಡೆಯುತ್ತವೆ.

ಹೆಣ್ಣುಮಕ್ಕಳಿಗಿಂತ ತಾವೇನು ಕಮ್ಮಿ ಎನ್ನುವಂಥ ಪುರುಷರ ಫ್ಯಾಷನ್​ ಷೋ ಒಂದರ ಕಾರ್ಯಕ್ರಮದ ವಿಡಿಯೋ ವೈರಲ್​ ಆಗಿದೆ. ಫ್ಯಾಷನ್ ಲೇಬಲ್ ಮೊವಾಲೋಲಾ ಕಂಪೆನಿ ಸದಾ ತನ್ನ ಚಮತ್ಕಾರಿ ಸಂಗ್ರಹವನ್ನು ಆಗಾಗ್ಗೆ ಪ್ರದರ್ಶಿಸುತ್ತಿದ್ದು, ಈ ವಾರದ ಆರಂಭದಲ್ಲಿ ಲಂಡನ್‌ನಲ್ಲಿ ಕೆಲವು ವಿಲಕ್ಷಣ ಡೆನಿಮ್‌ಗಳನ್ನು ಪ್ರದರ್ಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋದಲ್ಲಿ ಜೀನ್ಸ್​ ಪ್ಯಾಂಟ್​ಗಳನ್ನು ಮೊಣಕಾಲಿಗಿಂತ ಕೆಳಗೆ ತೊಟ್ಟಿರುವ ಕೆಲವು ಯುವಕರು ತಮ್ಮ ಒಳ ಉಡುಪು ಪ್ರದರ್ಶಿಸುತ್ತಾ ರ್ಯಾಂಪ್​ವಾಕ್​ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಥರಹೇವಾರಿ ಕಮೆಂಟ್​ಗಳು ಬರುತ್ತಿವೆ.

For Latest News Updates, Join Our Whatsapp Community🚩
RELATED ARTICLES

Most Popular