HomeEntertainment'ದಿ ಪ್ಯಾರಡೈಸ್ ' ಪ್ರೀಮಿಯರ್ ಶೋಗೆ ತೆಲಂಗಾಣ ಸಿಎಂ ಅನುಮತಿ ಕೋರಿದ ನಟ ನಾನಿ: ನೆನಪಾಯ್ತು...

‘ದಿ ಪ್ಯಾರಡೈಸ್ ‘ ಪ್ರೀಮಿಯರ್ ಶೋಗೆ ತೆಲಂಗಾಣ ಸಿಎಂ ಅನುಮತಿ ಕೋರಿದ ನಟ ನಾನಿ: ನೆನಪಾಯ್ತು ಪುಷ್ಪ 2 ಕಾಲ್ತುಳಿತ ದುರಂತ!

ತೆಲುಗು ಚಿತ್ರರಂಗದ ನಟ ನಾನಿ ಅಭಿನಯದ ‘ದ ಪ್ಯಾರಡೈಸ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ಹೈದರಾಬಾದ್‌ನ ಆರ್‌ಟಿಸಿ ಎಕ್ಸ್ ರೋಡ್ಸ್‌ನಲ್ಲಿ ಆಯೋಜನೆಗೊಂಡಿದ್ದು, ಈ ಪ್ರದರ್ಶನದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ನಾನಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಲ್ಲಿ ವಿನಂತಿಸಿದ್ದಾರೆ. ಸಾರ್ವಜನಿಕ ಭದ್ರತೆ ಹಾಗೂ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದಾಗಿ ಭರವಸೆ ನೀಡಿರುವ ನಟ, ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ.

ನಟ ನಾನಿ ಅವರ ಸಾಮಾಜಿಕ ಜಾಲತಾಣದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆ ಹಾಗೂ ಸಾರ್ವಜನಿಕರ ಭದ್ರತೆಯ ದೃಷ್ಟಿಯಿಂದ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಅರ್ಜಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 2024ರಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದಿದ್ದ ‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ವೇಳೆ ನಟ ಅಲ್ಲು ಅರ್ಜುನ್ ಆಗಮಿಸಿದಾಗ ಭಾರಿ ಜನಸ್ತೋಮ ನೆರೆದು ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡು, ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು. ಈ ದುರಂತದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಸಿನಿಮಾ ಕಾರ್ಯಕ್ರಮಗಳ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಬಾಲ್ಯದಿಂದಲೂ ಸಿನಿಮಾ ಪ್ರೇಮಿಯಾಗಿ ಆರ್‌ಟಿಸಿ ಎಕ್ಸ್ ರೋಡ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಬೆಳೆದಿರುವುದಾಗಿ ಹೇಳಿಕೊಂಡಿರುವ ನಾನಿ, ಅಭಿಮಾನಿಗಳ ಮಧ್ಯೆ ಕುಳಿತು ಸಿನಿಮಾ ವೀಕ್ಷಿಸುವುದು ತಮಗೆ ಅತ್ಯಂತ ಸಮಾಧಾನ ತರುತ್ತದೆ ಎಂದಿದ್ದಾರೆ. ಯುವ ನಿರ್ದೇಶಕ ಶ್ರೀಕಾಂತ್ ಒಡೆಲ ನಿರ್ದೇಶನದ ಈ ಚಿತ್ರದ ಪ್ರೀಮಿಯರ್‌ಗೆ ನಾನಿ ಮಾಡಿರುವ ಬಹಿರಂಗ ಮನವಿ ಈಗ ನೆಟ್ಟಿಗರ ನಡುವೆಯೂ ಭಾರಿ ಚರ್ಚೆಗೆ ಗ್ರಾಸವಾಗಿದೆ.


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular