alex Certify ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ: ಪತಿ ಹೇಮನಾಥ್​ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ: ಪತಿ ಹೇಮನಾಥ್​ ಅರೆಸ್ಟ್

ಜನಪ್ರಿಯ ಟೆಲಿವಿಷನ್​ ತಾರೆ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ ಸಂಬಂಧ ನಜರತ್​ ಪೇಟೆ ಪೊಲೀಸರು ಆಕೆಯ ಪತಿ ಹೇಮನಾಥ್​ನನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೇಮನಾಥ್​ ವಿರುದ್ಧ ಪೊಲೀಸರು ಸಾಕ್ಷ್ಯಗಳನ್ನ ಸಂಗ್ರಹಿಸಿದ್ದರು. ‌

ಚಿತ್ರಾ ಡಿಸೆಂಬರ್​ 9ರ ಮುಂಜಾನೆ ಹೋಟೆಲ್​ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 28 ವರ್ಷದ ಚಿತ್ರ ಪಾಂಡಿಯನ್​ ಸ್ಟೋರ್ಸ್ ಧಾರವಾಹಿ ಮೂಲಕ ಖ್ಯಾತಿ ಸಂಪಾದಿಸಿದ್ದರು.

ಚಿತ್ರಾ ಪತಿ ಹೇಮನಾಥ್​ರನ್ನ ಬಂಧಿಸಿದ ಪೊಲೀಸರು ಪೊನ್ನಮಲೈ ಹೈಕೋರ್ಟ್​ಗೆ ಹಾಜರುಪಡಿಸಿದ್ರು. 6 ದಿನಗಳ ವಿಚಾರಣೆ ಬಳಿಕ ಆತನನ್ನ ಪೊನ್ನೆರಿ ಜೈಲಿಗೆ ಕಳುಹಿಸಲಾಗಿದೆ. ಸೆಕ್ಷನ್​ 306 ಅಡಿಯಲ್ಲಿ ಹೇಮನಾಥ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಚಿತ್ರ ಹಾಗೂ ಹೇಮನಾಥ್​ 2 ತಿಂಗಳ ಹಿಂದಷ್ಟೇ ರಿಜಿಸ್ಟರ್​ ವಿವಾಹವಾಗಿದ್ದರು. ಜನವರಿಯಲ್ಲಿ ಸಾಂಪ್ರದಾಯಿಕ ಮದುವೆಗೆ ಪ್ಲಾನ್​ ಮಾಡಿದ್ದರು. ವರದಿಗಳ ಪ್ರಕಾರ ಚಿತ್ರಾ ನಟನಾ ಜೀವನದ ಬಗ್ಗೆ ಹೇಮನಾಥ್​ ಅತೃಪ್ತಿ ಹೊಂದಿದ್ದ ಎನ್ನಲಾಗಿದೆ. ಆಕೆ ಧಾರವಾಹಿಗಳಲ್ಲಿ ರೋಮ್ಯಾಂಟಿಕ್​ ಪಾತ್ರಗಳಲ್ಲಿ ಕಾಣಿಸಿಕೊಳ್ತಾ ಇದ್ದದ್ದು ಹೇಮನಾಥ್​ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಕಲಹವೇರ್ಪಡುತ್ತಿತ್ತು ಎನ್ನಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...