ಜನಪ್ರಿಯ ಟೆಲಿವಿಷನ್ ತಾರೆ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ ಸಂಬಂಧ ನಜರತ್ ಪೇಟೆ ಪೊಲೀಸರು ಆಕೆಯ ಪತಿ ಹೇಮನಾಥ್ನನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೇಮನಾಥ್ ವಿರುದ್ಧ ಪೊಲೀಸರು ಸಾಕ್ಷ್ಯಗಳನ್ನ ಸಂಗ್ರಹಿಸಿದ್ದರು.
ಚಿತ್ರಾ ಡಿಸೆಂಬರ್ 9ರ ಮುಂಜಾನೆ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 28 ವರ್ಷದ ಚಿತ್ರ ಪಾಂಡಿಯನ್ ಸ್ಟೋರ್ಸ್ ಧಾರವಾಹಿ ಮೂಲಕ ಖ್ಯಾತಿ ಸಂಪಾದಿಸಿದ್ದರು.
ಚಿತ್ರಾ ಪತಿ ಹೇಮನಾಥ್ರನ್ನ ಬಂಧಿಸಿದ ಪೊಲೀಸರು ಪೊನ್ನಮಲೈ ಹೈಕೋರ್ಟ್ಗೆ ಹಾಜರುಪಡಿಸಿದ್ರು. 6 ದಿನಗಳ ವಿಚಾರಣೆ ಬಳಿಕ ಆತನನ್ನ ಪೊನ್ನೆರಿ ಜೈಲಿಗೆ ಕಳುಹಿಸಲಾಗಿದೆ. ಸೆಕ್ಷನ್ 306 ಅಡಿಯಲ್ಲಿ ಹೇಮನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರ ಹಾಗೂ ಹೇಮನಾಥ್ 2 ತಿಂಗಳ ಹಿಂದಷ್ಟೇ ರಿಜಿಸ್ಟರ್ ವಿವಾಹವಾಗಿದ್ದರು. ಜನವರಿಯಲ್ಲಿ ಸಾಂಪ್ರದಾಯಿಕ ಮದುವೆಗೆ ಪ್ಲಾನ್ ಮಾಡಿದ್ದರು. ವರದಿಗಳ ಪ್ರಕಾರ ಚಿತ್ರಾ ನಟನಾ ಜೀವನದ ಬಗ್ಗೆ ಹೇಮನಾಥ್ ಅತೃಪ್ತಿ ಹೊಂದಿದ್ದ ಎನ್ನಲಾಗಿದೆ. ಆಕೆ ಧಾರವಾಹಿಗಳಲ್ಲಿ ರೋಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ತಾ ಇದ್ದದ್ದು ಹೇಮನಾಥ್ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಕಲಹವೇರ್ಪಡುತ್ತಿತ್ತು ಎನ್ನಲಾಗಿದೆ.