alex Certify ಲಾಕ್ ಡೌನ್ ಮಧ್ಯೆ ಹರ್ಯಾಣದಲ್ಲಿ ನಡೆದಿದೆ ಕಾಮುಕರ ಅಟ್ಟಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮಧ್ಯೆ ಹರ್ಯಾಣದಲ್ಲಿ ನಡೆದಿದೆ ಕಾಮುಕರ ಅಟ್ಟಹಾಸ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಅತ್ಯಾಚಾರ ಪ್ರಕರಣಗಳು ಮಾತ್ರ ನಿಲ್ತಿಲ್ಲ. ಹರ್ಯಾಣದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಹರ್ಯಾಣದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ಒಂದು ಪ್ರಕರಣದಲ್ಲಿ ಶಿಕ್ಷಕನೊಬ್ಬನ ಮೇಲೆ ಆರೋಪ ಕೇಳಿ ಬಂದಿದೆ.

ಹರ್ಯಾಣ ಗ್ರಾಮವೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕ ಅತ್ಯಾಚಾರವೆಸಗಿದ್ದಾನೆ. ಟೀ, ಸಿಹಿ ತಿಂಡಿ ನೆಪ ಹೇಳಿ ವಿದ್ಯಾರ್ಥಿನಿಯನ್ನು ಕರೆಯುತ್ತಿದ್ದನಂತೆ. ಅಲ್ಲಿ ಆತನಿಗೆ ಅತ್ತಿಗೆ ನೆರವಾಗಿದ್ದಳಂತೆ. ಅತ್ತಿಗೆ ಬಾಗಿಲು ಕಾಯ್ತಿದ್ದರೆ ಶಿಕ್ಷಕ ಅತ್ಯಾಚಾರವೆಸಗುತ್ತಿದ್ದನಂತೆ. ಮಾರ್ಚ್ 24 ಹಾಗೂ ಏಪ್ರಿಲ್ 10ರಂದು ಅತ್ಯಾಚಾರವೆಸಗಿದ್ದಾನೆಂದು ಬಾಲಕಿ ಆರೋಪ ಮಾಡಿದ್ದಾಳೆ.

ಇನ್ನೊಂದು ಪ್ರಕರಣದಲ್ಲಿ ಪಕ್ಕದ ಮನೆ ವ್ಯಕ್ತಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ತಂದೆ ಜೊತೆ ತೋಟದಿಂದ ಫಸಲು ತರ್ತಿದ್ದ ಬಾಲಕಿಯನ್ನು ಪಕ್ಕದ ಮನೆಯಾಕೆ ಕರೆದಿದ್ದಾಳೆ. ಅಲ್ಲಿಗೆ ಹೋಗ್ತಿದ್ದಂತೆ ಆರೋಪಿ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಈವರೆಗೂ ಯಾರನ್ನೂ ಬಂಧಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...