alex Certify ನಟಿ ಮನೆಗೆ ನುಗ್ಗಿದ ಅಪರಿಚಿತ‌ ಯುವಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಮನೆಗೆ ನುಗ್ಗಿದ ಅಪರಿಚಿತ‌ ಯುವಕ ಅರೆಸ್ಟ್

ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್​ವಾಡ್​ ಎಂಬಲ್ಲಿ ಮರಾಠಿ ನಟಿ ಸೊನಾಲಿ ಕುಲಕರ್ಣಿ ನಿವಾಸಕ್ಕೆ ನುಗ್ಗಿದ 24 ವರ್ಷದ ಯುವಕ ಚಾಕುವಿನಿಂದ ನಟಿಯ ತಂದೆಗೆ ಗಾಯ ಮಾಡಿದ ಘಟನೆ ವರದಿಯಾಗಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆ ವ್ಯಕ್ತಿ ಅಪಾರ್ಟ್​ಮೆಂಟ್​ಗೆ ನುಗ್ಗಿದ್ದು ಏಕೆ ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆಟಿಕೆ ಗನ್ ಹಾಗೂ ಚಾಕುವನ್ನ ಹಿಡಿದಿದ್ದ ವ್ಯಕ್ತಿಯು ಟೆರಾಸ್​ ಏರಿ ಅಪಾರ್ಟ್​ಮೆಂಟ್​ನ ಒಳಕ್ಕೆ ನುಗ್ಗಿದ್ದಾನೆ ಎಂದು ಪಿಂಪ್ರಿ ಚಿಂಚ್​ವಾಡ್​ ಪೊಲೀಸರು ಹೇಳಿದ್ದಾರೆ.

ಮನೆಗೆಲಸದಾಕೆ ಈ ವ್ಯಕ್ತಿಯನ್ನ ಮೊದಲು ನೋಡಿದ್ದಾಳೆ. ಆತ ಪೊಲೀಸರ ಕೈನಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾನೆ.

ಬಳಿಕ ನಟಿಯ ತಂದೆ ಮನೋಹರ್​ ಕುಲಕರ್ಣಿ ಈತನನ್ನ ಹಿಡಿಯಲು ಯತ್ನಿಸಿದ್ದು ಈ ವೇಳೆ ಚಾಕುವಿನಿಂದ ಸಣ್ಣಪುಟ್ಟ ಗಾಯವಾಗಿದೆ. ಇದಾದ ಬಳಿಕ ಅಪಾರ್ಟ್​ಮೆಂಟ್​ನಲ್ಲಿದ್ದ ಇತರರು ಈತನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಪೊಲೀಸರ ಕೈಗೊಪ್ಪಿಸಿದ್ದಾರೆ.

ವಿಚಾರಣೆಯ ವೇಳೆ ಈತ ನಾನು ನಟಿ ಸೋನಾಲಿ ಕುಲಕರ್ಣಿ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...