alex Certify ನಡು ರಸ್ತೆಯಲ್ಲಿ ಸಹೋದರಿಯನ್ನೇ ಇರಿದು ಕೊಂದ ಪಾಪಿ….! ವೈರಲ್​ ಆಯ್ತು​ ಮರ್ಡರ್​ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡು ರಸ್ತೆಯಲ್ಲಿ ಸಹೋದರಿಯನ್ನೇ ಇರಿದು ಕೊಂದ ಪಾಪಿ….! ವೈರಲ್​ ಆಯ್ತು​ ಮರ್ಡರ್​ ವಿಡಿಯೋ


ನಡು ರಸ್ತೆಯಲ್ಲಿ ಸ್ವಂತ ಸಹೋದರಿಯನ್ನೇ 8 ರಿಂದ 10 ಬಾರಿ ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಕೋಟ್​ನ ಮುಂದ್ರಾ ಪಟ್ಟಣದಲ್ಲಿ ನಡೆದಿದೆ.
ಸಾರ್ವಜನಿಕರ ಸಮ್ಮುಖದಲ್ಲೇ ಸಹೋದರಿಗೆ ಚಾಕುವಿನಿಂದ ಆರೋಪಿ ಇರಿದಿದ್ದಾನೆ. ಆಕೆ ಸತ್ತಿದ್ದಾಳೆ ಅನ್ನೋದು ಕನ್ಫರ್ಮ್​ ಆಗೋವರೆಗೂ ಆತ ಇರಿಯುತ್ತಲೇ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

22 ವರ್ಷದ ಸಹೋದರಿ ರೀನಾರನ್ನ ಕೊಲೆ ಮಾಡಿದ ಬಳಿಕ ಆರೋಪಿ ಪ್ರೇಮಸಂಗ್​ ತಂಕ್​ ಎಂಬಾತ ಎಸ್ಕೇಪ್​ ಆಗಿಲ್ಲ. ಬದಲಾಗಿ ಆಕೆಯ ದೇಹವನ್ನ ಹಿಡಿದು ಸಂಪೂರ್ಣ ಏರಿಯಾ ತುಂಬಾ ಓಡಾಡುತ್ತಾ ‘ನಾನು ನನ್ನ ಸಹೋದರಿಯನ್ನ ಕೊಲೆ ಮಾಡಿದ್ದೇನೆ, ನಾನು ಯಾರಿಗೂ ಹೆದರೋದಿಲ್ಲʼ ಎಂದು ಕಿರುಚಿದ್ದಾನೆ. ಪ್ರತ್ಯಕ್ಷದರ್ಶಿಗಳು ಪೊಲೀಸರು ಬರೋತಂಕ ಕದಲಬೇಡ ಎಂದು ಹೇಳಿದ್ರೆ ಅದಕ್ಕೂ ಒಪ್ಪಿದ ಆರೋಪಿ ಪೊಲೀಸರ ಬಳಿ ಶರಣಾಗಿದ್ದಾನೆ.

ಪ್ರಾಥಮಿಕ ಮಾಹಿತಿಯ ಅನುಸಾರ ಮೃತ ರೀನಾಗೆ ಇದ್ದ ವಿವಾಹೇತರ ಸಂಬಂಧವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ರೀನಾಳನ್ನ ಪ್ರೇಮಸಂಗ್​ ಕೊಲೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಮದುವೆಯಾದ ಕೆಲ ವರ್ಷಗಳ ಬಳಿಕ ಪತಿಯಿಂದ ದೂರಾಗಿದ್ದ ರೀನಾ ಮಾರುತಿ ನಗರದಲ್ಲಿ ಭವನ್​ ಜೋಗಿ ಎಂಬವನ ಜೊತೆ ವಾಸಿಸುತ್ತಿದ್ದಳು. ಆದರೆ ಈ ಭವನ್​ 2014ರಲ್ಲಿ ಕೊಲೆಯಾಗಿದ್ದ ರೀನಾ ತಂದೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಈ ಸಹೋದರರ ತಾಯಿ ಕೂಡ ಆರೋಪಿಯಾಗಿದ್ದಾಳೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ಅಧೀಕ್ಷಕ ಸೌರಭ್​ ಸಿಂಗ್​, ಪ್ರಾಥಮಿಕ ತನಿಖೆಯ ಪ್ರಕಾರ ರೀನಾಳ ಚಾರಿತ್ರ್ಯದ ಬಗ್ಗೆ ಅನೇಕರು ಮಾತನಾಡುತ್ತಿರೋದ್ರಿಂದ ಕೆರಳಿದ ಪ್ರೇಮ್​ ಸಿಂಗ್​ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...