alex Certify ಪಬ್ಜಿ ಮಿತ್ರರಿಂದಲೇ ಅತ್ಯಾಚಾರಕ್ಕೀಡಾದ 14ರ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಬ್ಜಿ ಮಿತ್ರರಿಂದಲೇ ಅತ್ಯಾಚಾರಕ್ಕೀಡಾದ 14ರ ಬಾಲಕಿ

ಪಬ್ಜಿ ಗೇಮ್ ಆಡುತ್ತಿದ್ದ ವೇಳೆ ಪರಿಚಯ ಮಾಡಿಕೊಂಡ 14 ವರ್ಷದ ಬಾಲಕಿಯನ್ನು ಮೂವರು ವ್ಯಕ್ತಿಗಳು ಅತ್ಯಾಚಾರಗೈದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಆನ್ಲೈನ್ ಗೇಮ್ ಆಡುತ್ತಿದ್ದ ವೇಳೆ ಪರಸ್ಪರರ ದೂರವಾಣಿ ಸಂಖ್ಯೆಗಳನ್ನು ಅದಲು ಬದಲು ಮಾಡಿಕೊಂಡಿದ್ದ ಬಳಿಕ ಈ ಎಲ್ಲರ ನಡುವೆ ನಿಕಟತೆ ಬೆಳೆದಿದೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ಶ್ರೀವಾಸ್ತವ ತಿಳಿಸಿದ್ದಾರೆ.

“ಎಸಿ ಮೆಕ್ಯಾನಿಕ್ ಆದ ಫಾಝೈಲ್, ಪೇಂಟರ್‌ ಫರ್ಹಾನ್ ಹಾಗೂ ಇವರ ಸಹಚರ ರಿಝ್ವಾನ್ ಆನ್ಲೈನ್‌ನಲ್ಲಿ ಪಬ್‌ಜಿ ಆಡುತ್ತಿದ್ದ ವೇಳೆ ಈ ಬಾಲಕಿಯನ್ನು ಫ್ರೆಂಡ್ ಮಾಡಿಕೊಂಡಿದ್ದಾರೆ. ಇದೇ ವೇಳೆ ನಂಬರ್‌ ಅದಲು ಬದಲು ಮಾಡಿಕೊಂಡ ಇವರು ಮುಖಾಮುಖಿ ಭೇಟಿಯಾಗಿದ್ದಾರೆ. ಆ ವೇಳೆ ಮೂವರು ಆರೋಪಿಗಳು ಬಾಲಕಿಯನ್ನು ಅತ್ಯಾಚಾರಗೈದಿದ್ದಾರೆ” ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

“ಘಟನೆ ನಡೆದ ಬಳಿಕ ಬಾಲಕಿಯನ್ನು ಬ್ಲಾಕ್‌ಮೇಲ್ ಮಾಡಿದ ಆರೋಪಿಗಳು, ಆಕೆಯ ಮೇಲೆ ಇನ್ನೂ 2-3 ಬಾರಿ ಅತ್ಯಾಚಾರಗೈದಿದ್ದಾರೆ. ನಂತರ ಬಾಲಕಿ ತನ್ನ ತಾಯಿಯೊಂದಿಗೆ ತನಗಾದ ಅನುಭವವನ್ನು ಹಂಚಿಕೊಂಡಾಗ, ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...