alex Certify ಮಧ್ಯರಾತ್ರಿ ಪಕ್ಕದ ಮನೆಗೆ ಹೋದವಳ ಸ್ಥಿತಿ ಹೀಗಾಯ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿ ಪಕ್ಕದ ಮನೆಗೆ ಹೋದವಳ ಸ್ಥಿತಿ ಹೀಗಾಯ್ತು

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅಪರಾಧ ಪ್ರಕರಣಗಳು ನಿಂತಿಲ್ಲ. ಅತ್ಯಾಚಾರ, ಕೌಟುಂಬಿಕ ದೌರ್ಜನ್ಯಗಳು ವರದಿಯಾಗ್ತಿವೆ. ಈಗ ಗ್ವಾಲಿಯರ್ ನಿಂದ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪಕ್ಕದ ಮನೆಯಲ್ಲಿ ವಾಸವಾಗಿದ್ದ ವಿದ್ಯಾರ್ಥಿ ಭೇಟಿಗೆ ವಿದ್ಯಾರ್ಥಿನಿ ಹೋಗಿದ್ದಾಳೆ. ಈ ವೇಳೆ ಆಕೆ ಸಹಪಾಠಿ ಅತ್ಯಾಚಾರವೆಸಗಿದ್ದಾನೆ. ನಂತ್ರ ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದೆ. 11ನೇ ತರಗತಿ ಓದುತ್ತಿರುವ ಅಪ್ರಾಪ್ತೆಗೆ ಐದು ತಿಂಗಳ ಹಿಂದೆ ಸನ್ನಿ ಎಂಬಾತನ ಸ್ನೇಹ ಬೆಳೆದಿದೆ. ಲಾಕ್ ಡೌನ್ ಗೂ ಮುನ್ನ ಏಪ್ರಿಲ್ 21ರಂದು ಸನ್ನಿ ಅಪ್ರಾಪ್ತೆಯನ್ನು ಮನೆಗೆ ಕರೆದಿದ್ದಾನೆ. ಮನೆಗೆ ಬಂದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಹತ್ಯೆ ಬೆದರಿಕೆ ಹಾಕಿದ್ದಾನೆ. ಆಗ ಸುಮ್ಮನಿದ್ದ ಅಪ್ರಾಪ್ತೆ ಈಗ ಪಾಲಕರಿಗೆ ವಿಷ್ಯ ತಿಳಿಸಿದ್ದಾಳೆ. ಆರೋಪಿ ನಾಪತ್ತೆಯಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...