HomeCrimeಲೋನ್ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ: ಸಿಐಡಿ ಪೊಲೀಸರ ದಾಳಿ

ಲೋನ್ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ: ಸಿಐಡಿ ಪೊಲೀಸರ ದಾಳಿ

ಸಾಲ ಕೊಡಿಸುತ್ತೇನೆ ಎಂದು ಹಲವು ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಮೇಲೆ ಸಿಐಡಿ ಪೊಲೀಸರು ವ್ಯಕ್ತಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ್ದಾರೆ. ಪೀಟರ್ ಕ್ಯಾಡಿ ಎಂಬಾತ ಮಾಡುತ್ತಿದ್ದ ವಂಚನೆಗಳು ದಿಗಲು ಹುಟ್ಟಿಸುವಂತಿದ್ದು, ಸಿಐಡಿ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಬೆಳಗ್ಗೆ ಸಿಐಡಿ ಪೊಲೀಸರು ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪ ಇರುವ ಪೀಟರ್ ಕ್ಯಾಡಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಸುಮಾರು 15 ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸಿ ತಪ್ಪಿಸಿಕೊಳ್ಳುತ್ತಿದ್ದ ಪೀಟರ್ ಕ್ಯಾಡಿ, ವಂಚನೆಗೆ ಓಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ನಾಟಕವಾಡುತ್ತಿದ್ದ. 

500ಕ್ಕೂ ಹೆಚ್ಚು ಮಂದಿ ಈತನಿಂದ ವಂಚನೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಸಾಲದ ಅಗತ್ಯ ಇರುವವರಿಗೆ ಗಾಳ ಹಾಕುತ್ತಿದ್ದ ಪೀಟರ್ ಕ್ಯಾಡಿ ತಾನು ಬ್ಯಾಂಕ್ ಬಡ್ಡಿಗಿಂತಲೂ ಕಡಿಮೆಗೆ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಅರಂಭದಲ್ಲಿ ಈತ ಕೋಟ್ಯಂತರ ರೂಪಾಯಿ ಮೊತ್ತದ ಡಿಡಿಯನ್ನು ಉದ್ಯಮಿಗಳ ಹೆಸರಿನಲ್ಲಿ ತೆಗೆದುಕೊಂಡು ತೋರಿಸುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಂಚನೆ ಮಾಡುತ್ತಿದ್ದ ಪೀಟರ್: ಪೀಟರ್ ಕ್ಯಾಡಿ ಮತ್ತು ಆತನ ಗ್ಯಾಂಗ್‌ ವಂಚನೆಯ ನಾಟಕವೇ ಬೇರೆ ರೀತಿಯಾಗಿತ್ತು. ಆತನನ್ನು ನಂಬಿ ಖಾಲಿ ಚೆಕ್ ಹಾಳೆ ಮತ್ತು ಆಸ್ತಿ ಪತ್ರಗಳನ್ನು ಉದ್ಯಮಿಗಳು ನೀಡುತ್ತಿದ್ದರು. ಈ ಹಂತದಲ್ಲಿ ಕೋಟಿ- ಕೋಟಿ ಮೊತ್ತವನ್ನು ಪ್ರೊಸೆಸಿಂಗ್ ಫೀ ಮತ್ತು ಕಮೀಷನ್ ಅಂತ ಪಡೆದುಕೊಂಡು ಲೋನ್ ಕೊಡದೇ ಮೋಸ ಮಾಡುತ್ತಿದ್ದ.

ಯಾರಾದರು ಕೊಟ್ಟ ಹಣ ವಾಪಸು ನೀಡುವಂತೆ ಕೇಳಿದರೆ ಅವರ ವಿರುದ್ಧ ಅವರೇ ಈ ಹಿಂದೆ ನೀಡಿದ್ದ ಚೆಕ್ ಮತ್ತು ಅಸ್ತಿ ಪತ್ರಗಳನ್ನು ದುರ್ಬಳಕೆ ಮಾಡಿಕೊಡಿಕೊಂಡು ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದ.

ಯಾರಾದರೂ ಕಚೇರಿಗೆ ಭೇಟಿ ನೀಡಿ ಹಣ ವಾಪಸು ಕೇಳಿದರೆ ಅಶ್ವಿನಿ ಎಂಬಾಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ ಎಂದು ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದ. 15ಕ್ಕಿಂತಲೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪೀಟರ್ ಕ್ಯಾಡಿ, ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಫ್ , ಚಾರಿ ಮುರಳಿ ಸೇರಿದಂತೆ ದೊಡ್ಡ ಪಟಾಲಂ ಕಟ್ಟಿಕೊಂಡಿರುವ ಪೀಟರ್ ಕ್ಯಾಡಿ ವಂಚನೆ ಮೂಲಕವೇ ಹಣಗಳಿಸುತ್ತಿದ್ದ.

 15 ಕೋಟಿ ವಂಚನೆ: ಕಳೆದ ವರ್ಷ ಸುಬ್ಬರಾವ್ ಎಂಬಾತ ಪೀಟರ್ ಕ್ಯಾಡಿ ವಿರುದ್ಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಸುಬ್ಬರಾವ್ ಅವರ ಜಮೀನು ದಾಖಲೆ ಸರಿಪಡಿಸಿ ಅದನ್ನು 300 ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸಿ 96 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ ಆ ಬಳಿಕ ಮೋಸ ಮಾಡಿದ್ದ.

ಕಮೀಷನ್ ಹೆಸರಿನಲ್ಲಿ ಸುಬ್ಬರಾವ್ ಬಳಿ ಚೆಕ್ ಪಡೆದಿದ್ದ ಪೀಟರ್ ಕ್ಯಾಡಿ ಮೋಸ ಮಾಡಿ ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಕೇಸು ದಾಖಲಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಸಬ್ಬರಾವ್ ಅವರು ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಸುಬ್ಬರಾವ್ ಪ್ರಕರಣದ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.

ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಸಿಐಡಿ ಪೊಲೀಸರಿಗೆ ಪೀಟರ್ ಕ್ಯಾಡಿ ತನ್ನ ಪಟಾಲಂ ಕಟ್ಟಿಕೊಂಡು ಹಲವಾರು ಉದ್ಯಮಿಗಳಿಗೆ ಲೋನ್ ಕೊಡಿಸುವುದಾಗಿ, ಆಸ್ತಿ ಖರೀದಿಸಿ ಕೊಡುವುದಾಗಿ ನಂಬಿಸಿ ಕೋಟಿ ಕೋಟಿ ವಂಚಿಸಿ ಐಶರಾಮಿ ಜೀವನ ನಡೆಸುತ್ತಿದ್ದ ಎಂಬ ಮಾಹಿತಿ ಸಿಕ್ಕಿತ್ತು.

ಈತನ ವಿರುದ್ಧ ಬೆಂಗಳೂರಿನ ಅಶೋಕನಗರ, ಜೀವನ್ ಭೀಮಾನಗರ, ಹಲಸೂರು, ಫುಲಿಕೇಶಿನಗರ, ಬೆಳ್ಳಂದೂರು ಪೊಲೀಸ್ ಠಾಣೆಗಳಲ್ಲಿ  ಎಫ್ಐಆರ್ ದಾಖಲಾಗಿವೆ. ಅಚ್ಚರಿ ಏನೆಂದರೆ ಈತನಿಂದ ವಂಚನೆಗೆ ಒಳಗಾದವರು ಹಣ ವಾಪಸು ಕೇಳದಂತೆ ಕಿರುಕುಳ ನೀಡುವ ಸಲುವಾಗಿ 300ಕ್ಕೂ ಹೆಚ್ಚು ಸುಳ್ಳು ಚೆಕ್ ಬೌನ್ಸ್ ಕೇಸು ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular