HomeLatest Newsಭಾರತದ ಆಟಗಾರರ ಬ್ಯಾಟ್‌ನಲ್ಲಿ ರಬ್ಬರ್ ಇದೆ, ಬೇರೆ ಆಟಗಾರರಿಗೆ ಅವರು ತೋರಿಸುವುದಿಲ್ಲ; ಲಂಕಾ ಕ್ರಿಕೆಟಿಗನ ಗಂಭೀರ...

ಭಾರತದ ಆಟಗಾರರ ಬ್ಯಾಟ್‌ನಲ್ಲಿ ರಬ್ಬರ್ ಇದೆ, ಬೇರೆ ಆಟಗಾರರಿಗೆ ಅವರು ತೋರಿಸುವುದಿಲ್ಲ; ಲಂಕಾ ಕ್ರಿಕೆಟಿಗನ ಗಂಭೀರ ಆರೋಪ!

ಸದ್ಯ ಭಾರತ ಹಾಗೂ ಶ್ರೀಲಂಕಾದಲ್ಲಿ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಗ್ರೂಪ್ ಹಂತದ ಪಂದ್ಯಗಳು ಜರುಗುತ್ತಿವೆ. ಈ ಬಾರಿ ಹೆಚ್ಚು ಕ್ರಿಕೆಟ್ ಶಿಶುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಅವುಗಳೂ ಸಹ ಅನುಭವಿ ತಂಡಗಳಿಗೆ ತಕ್ಕ ಪೈಪೋಟಿ ನೀಡುವ ಮೂಲಕ ಟೂರ್ನಿ ಕುತೂಹಲವನ್ನು ಹುಟ್ಟುಹಾಕಿದೆ.

ಹೀಗೆ ಯಶಸ್ಸಿನತ್ತ ಸಾಗುತ್ತಿರುವ ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲುವ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.

ಹೀಗಿರುವಾಗ ಭಾರತ ತಂಡದ ಆಟಗಾರರು ಬಳಸುವ ಬ್ಯಾಟ್ ಬಗ್ಗೆ ಶ್ರೀಲಂಕಾದ ಆಟಗಾರ ಭಾನುಕಾ ರಾಜಪಕ್ಸೆ ಸಂಶಯವೊಂದನ್ನು ಹೊರಹಾಕಿದ್ದಾರೆ ಎಂದು ಕ್ರಿಕ್‌ವೈರ್ ಎಂಬ ಶ್ರೀಲಂಕಾದ ಕ್ರೀಡಾ ವೆಬ್‌ಸೈಟ್ ವರದಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೋಸ್ಟ್‌ನಲ್ಲಿ ಭಾರತದ ಆಟಗಾರರ ಪವರ್ ಹಿಟ್ಟಿಂಗ್ ಅನ್ನು ನೋಡಿದಾಗ ಇಷ್ಟೊಂದು ವಿಭಿನ್ನ ಹೇಗೆ ಎಂಬ ಪ್ರಶ್ನೆಗೆ ಭಾನುಕಾ ರಾಜಪಕ್ಸೆ ಉತ್ತರಿಸಿದ್ದು, ‘ಈ ಕುರಿತು ಹೇಳುವುದಾದರೆ ಅವರು ಬ್ಯಾಟ್ ನಮ್ಮ ಬ್ಯಾಟ್‌ಗಳಿಂದ ಎರಡು ಪಟ್ಟು ಉತ್ತಮವಾಗಿವೆ. ಅವುಗಳನ್ನು ಸುಮ್ಮನೆ ಹಣ ಕೊಟ್ಟು ಕೊಳ್ಳಲಾಗುವುದಿಲ್ಲ. ನನಗೆ ಗೊತ್ತಿಲ್ಲ ಅವರು ರಬ್ಬರ್ ಅಂಟಿಸುತ್ತಾರೋ ಏನೋ.. ಅವರು ಬಾರಿಸುವ ಹೊಡೆತಗಳು, ಟೈಮಿಂಗ್ ಹಾಗೂ ಬ್ಯಾಲೆನ್ಸ್ ಎಲ್ಲವೂ ವಿಭಿನ್ನವಾಗಿದೆ’ ಎಂದು ಹೇಳುವ ಮೂಲಕ ಆರೋಪಿಸಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಭಾನುಕಾ ರಾಜಪಕ್ಸೆ ‘ನಮ್ಮ ಆಟಗಾರರಿಗೂ ಉತ್ತಮ ಬ್ಯಾಟ್‌ಗಳೇ ಸಿಗುತ್ತವೆ. ಆದರೆ ಭಾರತದ ಆಟಗಾರರ ಬ್ಯಾಟ್‌ಗಳು ನಮ್ಮ ಬ್ಯಾಟ್‌ಗಳಿಗಿಂತ ಉತ್ತಮವಾಗಿವೆ. ಅವರ ಬೌಲರ್‌ಗಳು ಬಳಸುವ ಬ್ಯಾಟ್ ಸಹ ನಮ್ಮ ಬ್ಯಾಟ್‌ಗಳಿಗಿಂತ ಉತ್ತಮವಾಗಿವೆ. ಅವುಗಳನ್ನು ನಮಗೆ ಅಷ್ಟು ಸುಲಭವಾಗಿ ಅವರು ತೋರಿಸುವುದೂ ಇಲ್ಲ. ಆ ವಿಷಯ ಎಲ್ಲಾ ಆಟಗಾರರಿಗೂ ಗೊತ್ತು, ಅದು ಜಗತ್ತಿಗೇ ತಿಳಿದಿದೆ’ ಎಂದು ಹೇಳಿದ್ದಾರೆ.

ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಭಾನುಕಾ ರಾಜಪಕ್ಸೆ ವಿರುದ್ಧ ಟೀಕೆ ಆರಂಭಿಸಿದ್ದಾರೆ. ಭಾನುಕಾ ರಾಜಪಕ್ಸೆ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಬಾಲ್ಯದಲ್ಲಿ ರಿಕಿ ಪಾಂಟಿಂಗ್ ಬ್ಯಾಟ್‌ನಲ್ಲಿ ಸ್ಪ್ರಿಂಗ್ ಇದೆ ಎಂದು ಹಬ್ಬಿದ್ದ ವದಂತಿ ನೆನಪಿಗೆ ಬರುತ್ತಿದೆ ಎಂದು ಕಾಲೆಳೆದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular