HomeKarnatakaBIG NEWS: ದೇಶಕ್ಕೆ ಬುದ್ಧಿ ಹೇಳುವ ದೇವೇಗೌಡರು ತಮ್ಮ ಮಗನಿಗೆ ಯಾಕೆ ಬುದ್ದಿ ಹೇಳುತ್ತಿಲ್ಲ? ಸಚಿವ...

BIG NEWS: ದೇಶಕ್ಕೆ ಬುದ್ಧಿ ಹೇಳುವ ದೇವೇಗೌಡರು ತಮ್ಮ ಮಗನಿಗೆ ಯಾಕೆ ಬುದ್ದಿ ಹೇಳುತ್ತಿಲ್ಲ? ಸಚಿವ ಚಲುವರಾಯಸ್ವಾಮಿ ಪ್ರಶ್ನೆ

ಮೈಸೂರು: ದೇಶಕ್ಕೆ ಬುದ್ಧಿ ಹೇಳುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿಗೆ ಯಾಕೆ ಬುದ್ಧಿ ಹೇಳಲ್ಲ? ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಹೆಚ್.ಡಿ.ಕುಮಾರಸ್ವಾಮಿ ಕೆಲಸ ಮಾಡದೇ ಮೂರು ದಿನಕ್ಕೊಮ್ಮೆ ಬಂದು ಮಾತನಾಡುತ್ತಿದ್ದಾರೆ. ಈ ಬಗ್ಗೆ ದೇವೇಗೌಡರು ಹೆಚ್.ಡಿ.ಕೆಗೆ ಬುದ್ಧಿ ಹೇಳದಿರುವುದು ಸೂಜಿಗವೆನಿಸುತ್ತದೆ ಎಂದು ವ್ಯಂಗ್ಯವಾಡಿದರು.

ನಾನು ಕೃಷಿ ಮಂತ್ರಿಯಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇನೆ. ಅವರು ಕೇಂದ್ರ ಕೈಗಾರಿಕಾ ಮಂತ್ರಿಯಾಗಿ ಕೈಗಾರಿಕಾ ಅಭಿವೃದ್ಧಿ ಕೆಲಸ ಮಾಡಲಿ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿ ನಾಯಿ, ನರಿ ,ಹಂದಿ ಪದ ಬಳಕೆ ಮಡುತ್ತಿದ್ದಾರೆ. ಅವರ ಪ್ರಕಾರ ಅವರೊಬ್ಬರೇ ಸಭ್ಯಸ್ಥರು ಅಂದುಕೊಂಡಿದ್ದಾರೆ. ಮೊದಲು ಅನಗತ್ಯವಾಗಿ ಹೇಳಿಕೆಗಳನ್ನು ಕೊಡುವುದನ್ನು ಕುಮಾರಸ್ವಾಮಿ ಬಿಡಬೇಕು ಎಂದರು.

 

For Latest News Updates, Join Our Whatsapp Community🚩
RELATED ARTICLES

Most Popular