alex Certify Karnataka | Kannada Dunia | Kannada News | Karnataka News | India News - Part 515
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಕ್ಷೇತ್ರದ ಬಿಜೆಪಿ ಬಂಡಾಯ ಶಮನ: ಶಾಸಕ ಚಂದ್ರಪ್ಪ ಮನವೊಲಿಸುವಲ್ಲಿ BSY, ವಿಜಯೇಂದ್ರ ಯಶಸ್ವಿ

ಬೆಂಗಳೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಮನವೊಲಿಕೆ ಯಶಸ್ವಿಯಾಗಿದೆ. ಚಂದ್ರಪ್ಪ ಅವರ ಮನವೊಲಿಸುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ Read more…

ಅಮಿತ್ ಶಾ ಗೂಂಡಾ ಎಂದ ಯತೀಂದ್ರ ಸಿದ್ಧರಾಮಯ್ಯಗೆ ಚುನಾವಣಾ ಆಯೋಗ ನೋಟಿಸ್

ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ ಎಂದು ಹೇಳಿಕೆ ನೀಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಇತ್ತೀಚೆಗೆ ಹನೂರಿನಲ್ಲಿ Read more…

ಗ್ರಾಮಕ್ಕೆ ನುಗ್ಗಿದ ಚಿರತೆ ಬೆನ್ನಟ್ಟಿ ಹಿಡಿದ ಜನ

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಗ್ರಾಮಸ್ಥರು ಬೆನ್ನಟ್ಟಿ ಹಿಡಿದಿದ್ದಾರೆ. ಕೆಲವು ದಿನಗಳಿಂದ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಚಿರತೆ ಜನರಲ್ಲಿ ಆತಂಕ Read more…

ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಘೋಷಿಸಿಕೊಂಡ ಯದುವೀರ್ ಒಡೆಯರ್, ಎಷ್ಟಿದೆ ಗೊತ್ತಾ..?

ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯದುವೀರ್ ಒಡೆಯರ್ ಒಟ್ಟು ತಮ್ಮ 4,99 ಕೋಟಿ ರೂ ಆಸ್ತಿ ಘೋಷಿಸಿದ್ದಾರೆ. ತಮ್ಮ ಒಡೆತನದಲ್ಲಿ ಯಾವುದೇ ಮನೆ, ಕೃಷಿ ಭೂಮಿ, Read more…

ನಕ್ಷತ್ರಗಳನ್ನು ಎಣಿಸಬಹುದೇನೋ, ಹಾಸನದ ಕಾಂಗ್ರೆಸ್ ಬೆಂಬಲಿಗರನ್ನು ಎಣಿಸೋದು ಅಸಾಧ್ಯ ; ಡಿಸಿಎಂ ಡಿಕೆಶಿ

ಹಾಸನ : ನಕ್ಷತ್ರಗಳನ್ನು ಎಣಿಸಬಹುದೇನೋ, ಹಾಸನದ ಕಾಂಗ್ರೆಸ್ ಬೆಂಬಲಿಗರನ್ನು ಎಣಿಸೋದು ಅಸಾಧ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ Read more…

‘ಬರೀ ಡೈಲಾಗ್ ಹೊಡೆದ್ರೆ ಜನರ ಬದುಕಿನ ಸಂಕಷ್ಟ ಕಡಿಮೆ ಆಗ್ತದಾ’? : ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ

ಬೆಂಗಳೂರು : ಬರೀ ಡೈಲಾಗ್ ಹೊಡೆದರೆ ಜನರ ಬದುಕಿನ ಸಂಕಷ್ಟ ಕಡಿಮೆ ಆಗ್ತದಾ? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು Read more…

‘ಮೋದಿ ಪ್ರಧಾನಿಯಾದರೆ ದೇವೇಗೌಡರು ದೇಶಬಿಟ್ಟು ಹೋಗುತ್ತೇನೆ ಎಂದಿದ್ರು’ ; ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ Read more…

BREAKING : ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ; ಡಿಸಿಎಂ ಡಿಕೆಶಿ ವಿರುದ್ಧ ‘FIR’ ದಾಖಲು

ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ ಐ ಆರ್ Read more…

BREAKING : ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!

ಬೆಂಗಳೂರು : ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆ  ಹಿನ್ನೆಲೆ   ಪತ್ನಿ ಗೀತಾ Read more…

BREAKING : ಮಹಿಳೆ ಜೊತೆ ಕಿರಿಕ್ ; ಹಾಸ್ಯನಟ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ದೂರು ದಾಖಲು

ಬೆಂಗಳೂರು : ಮಹಿಳೆ ಜೊತೆ ಕಿರಿಕ್ ಮಾಡಿದ ಹಿನ್ನೆಲೆ  ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು ದಾಖಲಾಗಿದೆ. ರಾಜ್ ಕುಮಾರ್ ರಸ್ತೆಯ 10 ನೇ Read more…

ಬೆಂಗಳೂರಲ್ಲಿ ಕಾರು ಫಾಲೋ ಮಾಡಿ ಮಹಿಳೆಗೆ ಕಿರುಕುಳ ನೀಡಿದ ಪುಂಡರು ; ವಿಡಿಯೋ ವೈರಲ್ |Video

ಬೆಂಗಳೂರು : ಸ್ಕೂಟರ್ ನಲ್ಲಿ ಮಹಿಳೆಯಿದ್ದ ಕಾರನ್ನು ಹಿಂಬಾಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬೆಂಗಳೂರು ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ Read more…

‘ಪ್ರಧಾನಿ ಮೋದಿ ಜೀವಮಾನದಲ್ಲೇ ಸತ್ಯ ಹೇಳಿದವರಲ್ಲ’ : ಸಿಎಂ ಸಿದ್ದರಾಮಯ್ಯ ವಾಗ್ಧಾಳಿ

ಬೆಂಗಳೂರು : ಪ್ರಧಾನಿ ಮೋದಿ ಜೀವಮಾನದಲ್ಲೇ ಸತ್ಯ ಹೇಳಿದವರಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಹೇಳುವ ಕಟ್ಟು ಕಥೆಗಳನ್ನು Read more…

ಬಳ್ಳಾರಿಯಲ್ಲಿ 8.640 ಲೀಟರ್ ಅಕ್ರಮ ಮದ್ಯ ಸಾಗಾಟ : ಪ್ರಕರಣ ದಾಖಲು

ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಿದ್ದು, ಭಾನುವಾರ ಅನಧೀಕೃತವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ, ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಸಂಡೂರು ತಾಲ್ಲೂಕಿನ Read more…

ಜೈಲಿನಲ್ಲಿರುವ ‘ರೀಲ್ಸ್ ರಾಣಿ’ ಸೋನುಗೌಡ ಭೇಟಿಯಾದ ನಟ ರಾಕೇಶ್ ಅಡಿಗ..!

ಬೆಂಗಳೂರು : ಅಕ್ರಮವಾಗಿ ಮಗು ದತ್ತು ಪ್ರಕರಣದಲ್ಲಿ ರೀಲ್ಸ್ ರಾಣಿ ಸೋನುಗೌಡ ಸದ್ಯ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಜೈಲು ಸೇರಿರುವ ನಟಿ ಸೋನುಗೌಡರನ್ನು ನಟ ರಾಕೇಶ್ ಅಡಿಗ ಭೇಟಿಯಾಗಿ Read more…

ನಟ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಏ.15 ರಿಂದ ಬೆಂಗಳೂರಲ್ಲಿ ‘ಟಾಕ್ಸಿಕ್’ ಶೂಟಿಂಗ್ ಆರಂಭ

ಬೆಂಗಳೂರು : ರಾಕಿಂಗ್ ಸ್ಟಾರ್ , ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಸಿದೆ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಎಂದರೆ ಏಪ್ರಿಲ್ 15 ರಿಂದ Read more…

BREAKING : ಬೆಂಗಳೂರಲ್ಲಿ ಟ್ರಕ್ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವು.!

ಬೆಂಗಳೂರು : ಟ್ರಕ್ ಹರಿದು 5 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ. ಮೃತ ಬಾಲಕನನ್ನು ಅಶ್ವಿತ್ (5) ಎಂದು ಗುರುತಿಸಲಾಗಿದೆ. ಊರ್ವಶಿ ಥಿಯೇಟರ್ ಬಳಿ Read more…

BREAKING : ಕೋಲಾರದಲ್ಲಿ ದಾರುಣ ಘಟನೆ ; ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ತಂದೆ ಆತ್ಮಹತ್ಯೆ

ಕೋಲಾರ : ಇಬ್ಬರು ಮಕ್ಕಳೊಂದಿಗೆ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾರಪುರದ ಸೀಗೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಾರಾಯಣ ಸ್ವಾಮಿ (40) ಪವನ್ Read more…

ನಾಳೆ ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಎಂಟ್ರಿ ; ಡಿಕೆ ಬ್ರದರ್ಸ್ ಭದ್ರಕೋಟೆಯಿಂದಲೇ ಚುನಾವಣಾ ಕಹಳೆ !

ಬೆಂಗಳೂರು : ಏ.2 ರಂದು ನಾಳೆ ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಡಲಿದ್ದು, ಡಿ.ಕೆ ಬ್ರದರ್ಸ್ ಭದ್ರಕೋಟೆಯಿಂದ ಚುನಾವಣಾ ರಣಕಹಳೆ ಆರಂಭಿಸಲಿದ್ದಾರೆ. ಇಂದು ರಾತ್ರಿಯೇ ಅಮಿತ್ Read more…

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ತಪ್ಪದೇ ಈ ವಿವರ ಸಲ್ಲಿಸುವಂತೆ ಸೂಚನೆ

ಬೆಂಗಳೂರು : 2023-24ನೇ ಸಾಲಿಗೆ ಸಂಬಂಧಿಸಿದಂತೆ, ಎಲ್ಲಾ ನೌಕರರು/ಅಧಿಕಾರಿಗಳು ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸುವುದರ ಹಾಗೂ ಶೋಧಿಸುವುದರ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ವಿಷಯಕ್ಕೆ Read more…

ವಾಹನ ಸವಾರರ ಗಮನಕ್ಕೆ : ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್

ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್ ಆಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಕಸಂದ್ರ ಸುರಂಗದಲ್ಲಿನ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದಲ್ಲಿನ ಪ್ರವೇಶ Read more…

BIG NEWS : ಬೆಂಗಳೂರಲ್ಲಿ ಹಾಡಹಗಲೇ ಅಪ್ರಾಪ್ತ ಪುಂಡರ ಅಟ್ಟಹಾಸ ; ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ದುಷ್ಕ್ರತ್ಯ

ಬೆಂಗಳೂರು : ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತ ಪುಂಡರು ಅಟ್ಟಹಾಸ ಮೆರೆದಿದ್ದು, ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ದುಷ್ಕ್ರತ್ಯ ಮೆರೆದಿದ್ದಾರೆ. ಹೆಲ್ಮೆಟ್ ಇಲ್ಲದೇ ಸ್ಕೂಟಿ ಚಲಾಯಿಸಿಕೊಂಡು ಬಂದ ಮೂವರು Read more…

BIG NEWS : ಪೊಲೀಸ್ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದ ಬ್ರುನೋ ಶ್ವಾನ ಇನ್ನಿಲ್ಲ

ಬೀದರ್ : ಪೊಲೀಸ್ ಇಲಾಖೆಯಲ್ಲಿ 10 ವರ್ಷ ಕಾಲ ಸೇವೆ ಸಲ್ಲಿಸಿದ್ದ ಬ್ರುನೋ ಶ್ವಾನ ಮೃತಪಟ್ಟಿದೆ. ರಾಜ್ಯಾದ್ಯಂತ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭ ಎಎಸ್ಸಿ ತಂಡದೊಂದಿಗೆ ಭದ್ರತಾ ತಪಾಸಣಾ ಕಾರ್ಯ Read more…

BREAKING : ಬೆಂಗಳೂರಲ್ಲಿಒಂಟಿ ಮಹಿಳೆ ಕಾರನ್ನು ಚೇಸ್ ಮಾಡಿ ಕಿರುಕುಳ ಪ್ರಕರಣ ; ಮೂವರು ಪುಂಡರು ಅರೆಸ್ಟ್

ಬೆಂಗಳೂರು : ಮಹಿಳೆ ಕಾರನ್ನು ಚೇಸ್ ಮಾಡಿ ಪುಂಡರು ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಒಂದೇ ಬೈಕ್ Read more…

ಸಾಲ ಕೊಟ್ಟ ಮಹಿಳೆ ಜೀವ ತೆಗೆದ ಯುವಕ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಜಯಮ್ಮ(62) ಅವರ ಶವ ಪತ್ತೆಯಾದ ಪ್ರಕರಣ ಭೇದಿಸಿದ ರಿಪ್ಪನ್ ಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಡೂರು ಯಳಗಲ್ಲು Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಿದೇಶದಲ್ಲೂ ಇಂಟರ್ನ್ ಶಿಪ್ ಗೆ ಅವಕಾಶ ಕಲ್ಪಿಸಿದ ವಿಟಿಯು

ಬೆಂಗಳೂರು: ವಿಟಿಯು ವಿದ್ಯಾರ್ಥಿಗಳು ಇನ್ನು ಮುಂದೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಇಂಟರ್ನ್ಶಿಪ್ ಮಾಡಬಹುದಾಗಿದೆ. ಈ ಮೊದಲು ವಿಟಿಯು ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಮಾತ್ರ ಇಂಟರ್ನ್ ಶಿಪ್ ಗೆ ಅವಕಾಶ Read more…

ರಾಮೇಶ್ವರಂ ಕೆಫೆ ಬಾಂಬ್ ‘ಸ್ಪೋಟ’ಕ ಮಾಹಿತಿ ಬಹಿರಂಗ: ಆರೋಪಿ ಮುಜಾಮಿಲ್ ಗೆ ಬಾಡಿಗೆ ಮನೆ ಕೊಡಿಸಿದ್ದು ಪೊಲೀಸ್ ಇನ್ ಸ್ಪೆಕ್ಟರ್

ಚಿಕ್ಕಮಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮುಜಾಮಿಲ್ ಗೆ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆ ಕೊಡಿಸಿದ್ದು ಪೊಲೀಸ್ ಇನ್ಸ್ಪೆಕ್ಟರ್ ಎನ್ನುವುದು ಗೊತ್ತಾಗಿದೆ. Read more…

ಸಂಸದೆ ಸುಮಲತಾ ಅಂಬರೀಶ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿಸಿಎಂ ಡಿಕೆಶಿ ಮಹತ್ವದ ಹೇಳಿಕೆ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿದೆ. ಬಿಜೆಪಿ -ಜೆಡಿಎಸ್ ಮೈತ್ರಿ ಕಾರಣ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. Read more…

ವಿದ್ಯಾರ್ಥಿಗಳ 81 ಕೋಟಿ ರೂ. ಸ್ಟೈಫಂಡ್ ದುರ್ಬಳಕೆ: ಎಫ್ಐಆರ್ ದಾಖಲು

ಕಲಬುರಗಿ: ಕಲಬುರಗಿಯ ಹೈದರಾಬಾದ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ 81.21 ಕೋಟಿ ರೂ. ಸ್ಟೈಫಂಡ್  ದುರ್ಬಳಕೆ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ ಸೈಬರ್ ಠಾಣೆಯಲ್ಲಿ ಭಾನುವಾರ Read more…

ಡಿಸಿಎಂ, ಸಚಿವರ ಕಚೇರಿಗಳಲ್ಲಿ ಚುನಾವಣಾ ರಾಜಕೀಯ ಚಟುವಟಿಕೆ: ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರು, ಶಾಸಕರು ಸರ್ಕಾರಿ ಕಚೇರಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ನಿಯೋಗದಿಂದ ಕೇಂದ್ರ Read more…

ಸಣ್ಣ ಮಕ್ಕಳಿರುವ ಪೋಷಕರೇ ಗಮನಿಸಿ: ಆಟವಾಡುವಾಗಲೇ ದಾರುಣ ಘಟನೆ: ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು

ಶಿವಮೊಗ್ಗ: ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಆಸಿಫ್ ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...