HomeLatest Newsಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ: ರಾಯ್ ಅಗಲಿಕೆಗೆ ಕಂಬನಿ ಮಿಡಿದ ಕುರಿಗಾಹಿ ಹನುಮಂತು: ಉದ್ಯಮಿಯೊಂದಿಗಿನ ಒಡನಾಟ ನೆನೆದು...

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ: ರಾಯ್ ಅಗಲಿಕೆಗೆ ಕಂಬನಿ ಮಿಡಿದ ಕುರಿಗಾಹಿ ಹನುಮಂತು: ಉದ್ಯಮಿಯೊಂದಿಗಿನ ಒಡನಾಟ ನೆನೆದು ಭಾವುಕನಾದ ಗಾಯಕ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಪಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ತಮ್ಮ ಕಚೇರಿಯಲ್ಲಿಯೇ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೈತ್ಯ ಉದ್ಯಮಿಯ ಆತ್ಮಹತ್ಯೆ ಪ್ರಕರಣ ಸಾಕಷ್ಟು ಚರ್ಚೆ, ಅನುಮಾನವನ್ನು ಹುಟ್ಟುಹಾಕಿದೆ. ಸೊನ್ನೆಯಿಂದ ಬೆಳೆದು ಸಾಮ್ರಾಜ್ಯವನ್ನೇ ಕಟ್ಟಿದ್ದ ದಕ್ಷಿಣ ಭಾರತದ ಖ್ಯಾತ ಉದ್ಯಮಿ ಐಟಿ ದಾಅಳಿಗೆ ಹೆದರಿ ಆತ್ಮಹತ್ಯೆಗೆ ಶರಣಾದರೇ? ಅಥವಾ ಅವರ ಸಾವಿನ ಹಿಂದೆ ಬೇರೇನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಉದ್ಯಮಿ ಸಿ.ಜೆ.ರಾಯ್ ಅಗಲಿಕೆಗೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಇನ್ನೊಂದೆಡೆ ಕುರಿಗಾಹಿ, ಖ್ಯಾತ ಜನಪದ ಗಾಯಕ, ಬಿಗ್ ಬಾಸ್ ವಿನ್ನರ್ ಹನುಮಂತು ತೀವ್ರ ಸಂತಾಪ ಸೂಚಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಸುದ್ದಿ ಕೇಳಿ ಬಹಳ ದು:ಖವಾಯಿತು. ನಿನ್ನೆಯೇ ವಿಷಯ ಗೊತ್ತಾಯಿತು. ಇದರಿಂದ ಮನಸ್ಸಿಗೆ ತುಂಬಾ ಘಾಸಿಯಾಯಿತು ಎಂದು ಕಂಬನಿ ಮಿಡಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರಿಗಮಪ ಗೆದ್ದಾಗ ಹಾಅಗೂ ಬಿಗ್ ಬಾಸ್ ವಿನ್ನರ್ ಆದಗ ಅವರನ್ನು ಭೇಟಿಯಾಗಿದ್ದೆ. ಸರಿಗಮಪ ಗೆದ್ದಾಗಲು ಸಿ.ಜೆ.ರಾಯ್ ಹಣ ನೀಡಿದ್ದರು. ಬಳಿಕ ಬಿಗ್ ಬಾಸ್ ಸೀಜನ್ -11 ವಿನ್ನರ್ ಆದಗಲೂ 50 ಲಕ್ಷ ರೂಪಾಯಿ ಹಣ ನೀಡಿದ್ದರು. ಈ ಹಣದಲ್ಲಿ ಏನು ಮಾಡುತ್ತೀಯಾ? ಊರಿನಲ್ಲಿ ಮನೆ ಕಟ್ಟಿಸು ಎಂದಿದ್ದರು. ಮನೆ ಕಟ್ಟಿಸು ಗೃಹಪ್ರವೇಶಕ್ಕೆ ಕರಿ ಬರುತ್ತೇನೆ ಎಂದು ಹೇಳಿದ್ದರು. ಸಿ.ಜೆ.ರಾಯ್ ಹಾಗೂ ಅವರ ಪತ್ನಿ ಬಹಳ ಒಳ್ಳೆಯವರು ಎಂದು ಅವರೊಂದಿಗಿನ ಒಡನಾಟವನ್ನು ಹನುಮಂತು ಸ್ಮರಿಸಿದ್ದಾರೆ.

ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ. ಗೃಹಪವೇಶಕ್ಕೆ ಕರೆಯುವುದಾಗಿ ಹೇಳಿದ್ದೆ. ನಿಮ್ಮ ಊರಿಗೆ ಬಂದಾಗ ನನಗೂ 5 ಕುರಿಗಳನ್ನು ಕೊಡು ನಾನೂ ಸಾಕುತ್ತೇನೆ ಎಂದು ಹೇಳಿದ್ದರು. ಆಯಿತು. ಕೊಡುತ್ತೇನೆ ಎಂದಿದ್ದೆ. ನನ್ನ ಅಪ್ಪ-ಅಮ್ಮನನ್ನು ನೋಡಿ ಬಹಳ ಖುಷಿ ಪಟ್ಟಿದ್ದರು. ಗ್ರಾಮೀಣ ಪ್ರತಿಭೆ ಬೆಳೆಯಬೇಕು ಎಂದು ಪ್ರೋತ್ಸಾಹಿಸಿದ್ದರು. ಜಾನಪದ ಹಾಡುಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು ಎಂದಿದ್ದಾರೆ.

ಅಲ್ಲದೇ ನನ್ನ ತಂಗಿ ಡಿಗ್ರಿ ಓದಲು 50 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದರು. ಡಿಗ್ರಿ ಬಳಿಕ ತಂಗಿಯನ್ನು ಬೆಂಗಳೂರಿಗೆ ಕಳುಹಿಸು. ನನ್ನ ಕಂಪನಿಯಲ್ಲಿಯೇ ಕೆಲಸ ಕೊಡುವುದಾಗಿ ಹೇಳಿದ್ದರು. ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿಯಾಗಿದ್ದ ವೇಳೆ ತಂಗಿ ಡಿಗ್ರಿ ಮುಗಿಸಿದಳಾ? ಕೆಲಸ ಕೊಡುತ್ತೇನೆ ಎಂದಿದ್ದರು. ಆದರೆ ನಾವು ಬೆಂಗಳೂರಿಗೆ ಕಳುಹಿಸಲ್ಲ, ನಮಗೆ ಬೆಂಗಳೂರು ಸರಿಬರಲ್ಲ ಎಂದು ಹೇಳಿದ್ದೆವು. ಸಿ.ಜೆ.ರಾಯ್ ಅಗಲಿಕೆ ತುಂಬಾ ದು:ಖ ತಂದಿದೆ ಹೀಗಾಗಬಾರದಿತ್ತು ಎಂದು ಕಣ್ಣೀರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular