HomeKarnatakaಬೆಂಗಳೂರು ಉಪನಗರ ರೈಲು ಯೋಜನೆ: 19 ಲಕ್ಷ ಜನರ ಸಂಚಾರ ನಿರೀಕ್ಷೆ

ಬೆಂಗಳೂರು ಉಪನಗರ ರೈಲು ಯೋಜನೆ: 19 ಲಕ್ಷ ಜನರ ಸಂಚಾರ ನಿರೀಕ್ಷೆ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ). ಇದನ್ನು ಕರ್ನಾಟಕ ಸರ್ಕಾರ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಕರ್ನಾಟಕ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸುತ್ತಿದೆ.

ಸುಮಾರು 148 ಕಿ.ಮೀ.ಉದ್ದದ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ 4 ಕಾರಿಡಾರ್‌ಗಳನ್ನು ಒಳಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ 2030ರಲ್ಲಿ ಸಬ್ ಅರ್ಬನ್ ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.

ಸಬ್ ಅರ್ಬನ್ ರೈಲು ಕಾರಿಡಾರ್‌ಗೆ ಮಲ್ಲಿಗೆ, ಸಂಪಿಗೆ, ಕನಕ ಮತ್ತು ಪಾರಿಜಾತ ಎಂದು ಹೆಸರಿಡಲಾಗಿದೆ. ಹಲವು ಕಡೆ ನಮ್ಮ ಮೆಟ್ರೋ ರೈಲು ಯೋಜನೆಗೆ ಸಬ್ ಅರ್ಬನ್ ರೈಲು ಸಂಪರ್ಕವನ್ನು ಕಲ್ಪಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಷ್ಟು ಪ್ರಯಾಣಿಕರ ಸಂಚಾರ?: ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಪೂರ್ಣಗೊಂಡ ನಂತರ ಸುಮಾರು 19 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ನಗರದ ರಸ್ತೆಗಳಿಂದ ಸುಮಾರು 40,000 ಬಸ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.

ಈ ಕುರಿತು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಮಾತನಾಡಿದ್ದಾರೆ. “ಈ ಯೋಜನೆಯು ಸುಮಾರು 24 ಲೆವೆಲ್ ಕ್ರಾಸಿಂಗ್‌ಗಳನ್ನು ರದ್ದುಗೊಳಿಸಲಿದೆ ಮತ್ತು 17 ಮೆಟ್ರೋ ನಿಲ್ದಾಣಗಳು, 22 ರೈಲು ನಿಲ್ದಾಣಗಳು ಮತ್ತು ಬಸ್ ಜಾಲದೊಂದಿಗೆ ಸಂಪರ್ಕ ಕಲ್ಪಿಸಲಿದೆ” ಎಂದು ಹೇಳಿದ್ದಾರೆ.

ಈ ಬಿಎಸ್‌ಆರ್‌ಪಿ ಯೋಜನೆಯ ಒಟ್ಟು ವೆಚ್ಚ 23,342 ಕೋಟಿ ರೂ.ಗಳು. 148 ಕಿ.ಮೀ. ಮಾರ್ಗವು 57 ನಿಲ್ದಾಣಗಳನ್ನು ಒಳಗೊಂಡಿದೆ. 4 ಕಾರಿಡಾರ್‌ಗಳಲ್ಲಿ ರೈಲುಗಳು ಸಂಚಾರವನ್ನು ನಡೆಸಲಿವೆ ಎಂದು ತಿಳಿಸಿದ್ದಾರೆ.

ಐಐಎಸ್‌ಸಿ ಮಾಹಿತಿ ಪ್ರಕಾರ ಎಲ್ಲಾ ಕಾರಿಡಾರ್‌ಗಳು ಸಿದ್ಧಗೊಂಡರೆ ಈ ಜಾಲ ಪ್ರತಿದಿನ 19 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಲಿದೆ. ಇದು ನಗರದ ರಸ್ತೆಗಳ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಎಂಡಿ ವಿವರಣೆ ನೀಡಿದ್ದಾರೆ.

ಈ ರೈಲು ಮಾರ್ಗದಲ್ಲಿ ಯಶವಂತಪುರ ಇಂಟರ್‌ಚೇಂಜ್‌ನ ವಿನ್ಯಾಸ ಎಲ್ಲರ ಗಮನ ಸೆಳೆಯಲಿದೆ. ಇದು ಉಪನಗರ ರೈಲು, ಮೆಟ್ರೋ ಮತ್ತು ಭಾರತೀಯ ರೈಲ್ವೆಯನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ.

ಇದಕ್ಕಾಗಿಯೇ 5 ಅಂತಸ್ತಿನ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಇಲ್ಲದಂತಹ ಹೊಸ ವಿನ್ಯಾಸದಲ್ಲಿ ಈ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಸಬ್ ಅರ್ಬನ್ ರೈಲುಗಳ ಸಂಚಾರಕ್ಕಾಗಿ ಸುಮಾರು 24 ಲೆವೆಲ್ ಕ್ರಾಸಿಂಗ್‌ಗಳನ್ನು ರದ್ದುಗೊಳಿಸಲಾಗುತ್ತಿದೆ.

ಜನನಿಬಿಡ ಪ್ರದೇಶಗಳಲ್ಲಿ ಸಾಮಾನ್ಯ ಮೇಲ್ಸೇತುವೆಗಳನ್ನು ನಿರ್ಮಿಸುವುದು ಸಂಚಾರ ದಟ್ಟಣೆಗೆ ಅಡಚಣೆಯಾಗದಂತೆ ಅಥವಾ ಜನರನ್ನು ಸ್ಥಳಾಂತರಿಸುವ ಅಗತ್ಯವಿಲ್ಲದಂತೆ ಕಾಮಗಾರಿ ಕೈಗೊಳ್ಳುವುದು ಪ್ರಮುಖವಾದ ಕ್ರಮವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular