HomeKarnatakaಪ್ರಯಾಣಿಕರೇ ಗಮನಿಸಿ: ಕಾಮಗಾರಿ ಹಿನ್ನೆಲೆ ಕೆಲ ರೈಲು ರದ್ದು, ಹಲವು ರೈಲು ಸೇವೆಗಳಲ್ಲಿ ಬದಲಾವಣೆ

ಪ್ರಯಾಣಿಕರೇ ಗಮನಿಸಿ: ಕಾಮಗಾರಿ ಹಿನ್ನೆಲೆ ಕೆಲ ರೈಲು ರದ್ದು, ಹಲವು ರೈಲು ಸೇವೆಗಳಲ್ಲಿ ಬದಲಾವಣೆ

ಬೆಂಗಳೂರು: ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ರಸ್ತೆ ಕೆಳ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮತ್ತು ಭಾಗಶಃ ರದ್ದು ಮಾಡಲಾಗಿದೆ.

ಫೆಬ್ರವರಿ 24, 27ರಂದು ಬಂಗಾರಪೇಟೆ -ಕೆಎಸ್ಆರ್ ಬೆಂಗಳೂರು(16521) ಮೆಮು ರೈಲು ಬೈಯ್ಯಪ್ಪನಹಳ್ಳಿಯಲ್ಲಿ ಕೊನೆಗೊಳ್ಳತ್ತದೆ.

ಫೆಬ್ರವರಿ 24 ಮತ್ತು 27ರಂದು ಹೊಸಪೇಟೆ- ಕೆಎಸ್ಆರ್ ಬೆಂಗಳೂರು(56520) ಡೈಲಿ ಪ್ಯಾಸೆಂಜರ್ ರೈಲು ಯಶವಂತಪುರದಲ್ಲಿ ನಿಲುಗಡೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿ 25 ಮತ್ತು 28 ರಂದು ಕೆಎಸ್ಆರ್ ಬೆಂಗಳೂರು -ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಕೆಎಎಸ್ಆರ್ ಬೆಂಗಳೂರು ಬದಲು ಯಶವಂತಪುರದಿಂದ ಹೊರಡಲಿದೆ.

ಫೆಬ್ರವರಿ 23 ಮತ್ತು 26ರಂದು ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ- ಕೆಎಸ್ಆರ್ ಬೆಂಗಳೂರು 07339 ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.

ಫೆಬ್ರವರಿ 24 ಮತ್ತು 27 ರಂದು ಹೊರಡುವ ಕೆಎಸ್ಆರ್ ಬೆಂಗಳೂರು- ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಯಶವಂತಪುರದಿಂದ ಹೊರಡಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular