HomeLatest NewsBREAKING : ಜಾತಿ ಗಣತಿ ವರದಿ ಅನುಷ್ಠಾನ ವಿಚಾರ : ಏ.17 ರಂದು ರಾಜ್ಯ ಸರ್ಕಾರದ...

BREAKING : ಜಾತಿ ಗಣತಿ ವರದಿ ಅನುಷ್ಠಾನ ವಿಚಾರ : ಏ.17 ರಂದು ರಾಜ್ಯ ಸರ್ಕಾರದ ವಿಶೇಷ ‘ಸಚಿವ ಸಂಪುಟ ಸಭೆ’ ನಿಗದಿ |Cabinet Meeting

ಬೆಂಗಳೂರು : ಜಾತಿ ಗಣತಿ ವರದಿ ಅನುಷ್ಟಾನ ವಿಚಾರಕ್ಕೆ ಸಂಬಂಧಿಸಿದಂತೆ ಏ.17 ರಂದು ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ.

ಏ.17 ರಂದು ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಜಾತಿ ಗಣತಿ ವರದಿ ಅನುಷ್ಟಾನ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2024 ರಲ್ಲಿ ಸಲ್ಲಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅಂತಿಮ ವರದಿಯನ್ನು ಮಂಡಿಸಲಾಗುತ್ತದೆ ರಾಜ್ಯ ಸರ್ಕಾರ ಸಜ್ಜಾಗಿದೆ. ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ಕೈಗೊಂಡ ಜಾತಿಗಣತಿ ಆಧರಿಸಿ ಜಯಪ್ರಕಾಶ್ ಹೆಗಡೆ ಅವರು
ಅಂತಿಮ ವರದಿ ಸಲ್ಲಿಸಿದ್ದು, ಇದಕ್ಕೆ ವೀರಶೈವರು, ಒಕ್ಕಲಿಗರು, ಹಿಂದುಳಿದ ವರ್ಗದ ಪ್ರಬಲ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸಾರ್ವಜನಿಕರ ಮನೆಮನೆಗೆ ಭೇಟಿ ನೀಡದೇ ವರದಿ ತಯಾರಿಸುವ ಈ ವರದಿ ಬಗ್ಗೆ ವಿಪಕ್ಷಗಳು ಗುಮಾನಿ ವ್ಯಕ್ತಪಡಿಸಿದೆ. ಇದನ್ನು ತಿರಸ್ಕರಿಸಬೇಕೆಂಬ ಒತ್ತಾಯಗಳು ಕೂಡ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular