ಶಿವಮೊಗ್ಗ: ಬಾವಿಯ ಮೋಟರ್ ವೈರ್ ನಿಂದ ವಿದ್ಯುತ್ ಹರಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಹರತಾಳು ಬಳಿ ನಡೆದಿದೆ.
ದೊಣಂದೂರು ನಿವಾಸಿ ಕೃಷ್ಣಪ್ಪ(59) ಮೃತಪಟ್ಟವರು ಎಂದು ಹೇಳಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೃಷ್ಣಪ್ಪ 3 ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಮನೆಯ ಹಿಂಭಾಗದಲ್ಲಿ ಬಾವಿ ತೋಡುವ ಕಾಮಗಾರಿಯ ವೇಳೆ ಘಟನೆ ನಡೆದಿದೆ.
ಬಾವಿಯ ನೀರು ಖಾಲಿ ಮಾಡಲು ಮೋಟರ್ ಹಾಕಲು ಕೃಷ್ಣಪ್ಪ ಮುಂದಾಗಿದ್ದರು. ಮೋಟರ್ ವೈರ್ ಅನ್ನು ಅಡುಗೆ ಮನೆಯ ಸ್ವಿಚ್ ಗೆ ಸಂಪರ್ಕಿಸಲು ಪ್ರಯತ್ನಿಸಿದ ವೇಳೆ ವೈರ್ ನಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಬ್ಬನ್ ಪೇಟೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

