ಬೆಂಗಳೂರು: ತುಮಕೂರು ಮಾರ್ಗವಾಗಿ ಅರಸೀಕೆರೆಗೆ ಮೆಮು ರೈಲು ಸೇವೆ ಆರಂಭಿಸಲಾಗಿದೆ. ಯಲಹಂಕದಿಂದ ಯಶವಂತಪುರ ಮಾರ್ಗವಾಗಿ ಮೆಮು ರೈಲು ಹೊರಡಲಿದೆ. ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದ್ದು ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆಮು ರೈಲಿನ ಸೇವೆಯನ್ನು ಒದಗಿಸಲಾಗಿದೆ.
ಯಲಹಂಕದಿಂದ, ಯಶವಂತಪುರ ಮಾರ್ಗವಾಗಿ ಹೊರಡುವ ಈ ಮೆಮು ರೈಲು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು, ವ್ಯಾಪಾರಿಗಳು ಸೇರಿದಂತೆ ಮುಂತಾದ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ. ಈ ಭಾಗದ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರು – ತುಮಕೂರು – ಅರಸೀಕೆರೆ ನಡುವೆ ನೂತನ ಮೆಮು ರೈಲು
ಮೆಮು ರೈಲಿನ ವಿವರ :
ಯಲಹಂಕ – ಅರಸೀಕೆರೆ ಮೆಮು ರೈಲು (ರೈ.ಸಂ 66505):
ಬೆಳಿಗ್ಗೆ 6.45ಕ್ಕೆ ಯಲಹಂಕದಿಂದ ಹೊರಡುವ ರೈಲು ಯಶವಂತಪುರ, ತುಮಕೂರು (ಬೆಳಿಗ್ಗೆ 08:58ಕ್ಕೆ) ಮಾರ್ಗವಾಗಿ ಅರಸೀಕೆರೆಗೆ ಬೆಳಿಗ್ಗೆ 11:00 ಗಂಟೆಗೆ ತಲುಪಲಿದೆ.
ಅರಸೀಕೆರೆ – ಯಲಹಂಕ ಮೆಮು ರೈಲು (ರೈ.ಸಂ 66506) : ಅರಸೀಕೆರೆಯಿಂದ ಮಧ್ಯಾಹ್ನ 02:15ಕ್ಕೆ ಹೊರಡುವ ರೈಲು, ತುಮಕೂರು (ಸಂಜೆ 04:38ಕ್ಕೆ) ಮಾರ್ಗವಾಗಿ ಯಲಹಂಕಕ್ಕೆ ಸಂಜೆ 07:15ಕ್ಕೆ ತಲುಪಲಿದೆ.
ಭಾನುವಾರದ ಹೊರತಾಗಿ ವಾರದ 6 ದಿನವೂ ಈ ಮೆಮು ರೈಲು ಸಂಚರಿಸಲಿದೆ.

