HomeLatest Newsಭಾರತಕ್ಕೆ ಜಿಂಬಾಬ್ವೆ ಸವಾಲು: ಟಿ20 ಸರಣಿಯಲ್ಲಿ ಯಾರೂ ಕಮ್ಮಿಯಿಲ್ಲ ಎಂದ ನಾಯಕ ಸಿಕಂದರ್ ರಾಜಾ!

ಭಾರತಕ್ಕೆ ಜಿಂಬಾಬ್ವೆ ಸವಾಲು: ಟಿ20 ಸರಣಿಯಲ್ಲಿ ಯಾರೂ ಕಮ್ಮಿಯಿಲ್ಲ ಎಂದ ನಾಯಕ ಸಿಕಂದರ್ ರಾಜಾ!

ಭಾರತ ಮತ್ತು ಜಿಂಬಾಬ್ವೆ ನಡುವೆ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವೇ ನೆಚ್ಚಿನ ತಂಡ ಎಂಬ ವಾದವನ್ನು ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ತಳ್ಳಿಹಾಕಿದ್ದಾರೆ. ಈ ಸರಣಿಯಲ್ಲಿ ಎರಡೂ ತಂಡಗಳಿಗೂ ಗೆಲ್ಲುವ ಸಮಾನ ಅವಕಾಶಗಳಿದ್ದು, ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಕಠಿಣ ಸವಾಲು ಎದುರಿಸಿ ಹಿನ್ನಡೆ ಅನುಭವಿಸಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವನ್ನು ಎದುರಿಸಲು ಜಿಂಬಾಬ್ವೆ ಸಜ್ಜಾಗಿದೆ. ಈ ಕುರಿತು ಮಾತನಾಡಿದ ಜಿಂಬಾಬ್ವೆ ನಾಯಕ, “ಈ ಸರಣಿಯಲ್ಲಿ ಎರಡೂ ದೇಶಗಳಿಗೂ ಗೆಲ್ಲಲು ಸಮಾನ ಅವಕಾಶಗಳಿವೆ. ಜಿಂಬಾಬ್ವೆ ಇತ್ತೀಚೆಗೆ ನಿರಂತರವಾಗಿ ಉತ್ತಮ ಹಾಗೂ ರೋಚಕ ಕ್ರಿಕೆಟ್ ಆಡುತ್ತಿರುವುದರಿಂದ ಈ ಸರಣಿಯು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲಿದೆ ಎಂಬ ಭರವಸೆ ನನಗಿದೆ” ಎಂದು ಹೇಳಿದ್ದಾರೆ.

ಸ್ಥಿರ ಪ್ರದರ್ಶನದ ಹಾದಿಯಲ್ಲಿ ಜಿಂಬಾಬ್ವೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿಯಲ್ಲಿ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ್ದ ಜಿಂಬಾಬ್ವೆ, ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿತ್ತು. ಅಲ್ಲದೆ ಈ ವರ್ಷ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧವೂ ಸಹ ಜಿಂಬಾಬ್ವೆ ಜಯ ದಾಖಲಿಸಿದೆ. 136 ಟಿ20 ಪಂದ್ಯಗಳ ಅನುಭವ ಹೊಂದಿರುವ ಸಿಕಂದರ್ ರಾಜಾ, ತಮ್ಮ ತಂಡದ ಇತ್ತೀಚಿನ ಫಾರ್ಮ್ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಿಕೆಟ್ ಪ್ರಸ್ತುತ ಬದಲಾವಣೆಯ ಹಂತದಲ್ಲಿದೆ (ಟ್ರಾನ್ಸಿಷನ್) ಎಂದು ಉಲ್ಲೇಖಿಸಿದ ಅವರು, “ಭಾರತೀಯ ತಂಡದಲ್ಲಿ ಹೊಸ ಬದಲಾವಣೆಗಳು ನಡೆಯುತ್ತಿವೆ. ಅದೇ ರೀತಿ ಜಿಂಬಾಬ್ವೆ ತಂಡದಲ್ಲೂ ಕೆಲ ಬದಲಾವಣೆಗಳನ್ನು ಕಾಣಬಹುದು. ಹೀಗಾಗಿ ಇದೊಂದು ಏಕಪಕ್ಷೀಯ ಸರಣಿಯಾಗಲಿದೆ ಎಂದು ನಾನು ಭಾವಿಸುವುದಿಲ್ಲ” ಎಂದಿದ್ದಾರೆ.

ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದ್ದು, ನಂತರದ ಎರಡು ಪಂದ್ಯಗಳು ಜುಲೈ 25 ಮತ್ತು 26 ರಂದು ಇದೇ ಮೈದಾನದಲ್ಲಿ ನಡೆಯಲಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular