ಬೆಂಗಳೂರು : ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹವನ್ನು ತಾಯ್ನಾಡಿಗೆ ಮರಳಿ ತರಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಮಾನದ ಮೂಲಕ ಭರತ್ ಭೂಷಣ್ ಅವರ ಮೃತದೇಹ ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಮಂಜುನಾಥ್ ರಾವ್ ಅವರ ಮೃತದೇಹ ಸಂಜೆ 6 ಗಂಟೆಗೆ ದೆಹಲಿ, ಬೆಂಗಳೂರು ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

