HomeIndiaBREAKING: ಚಂಡಿಘಡದ ಮೇಯರ್‌ ಆಗಿ ಬಿಜೆಪಿಯ ಹರ್ಪ್ರೀತ್‌ ಕೌರ್‌ ಬಬ್ಲಾ ಆಯ್ಕೆ; INDIA ಮೈತ್ರಿಕೂಟಕ್ಕೆ ಮುಖಭಂಗ

BREAKING: ಚಂಡಿಘಡದ ಮೇಯರ್‌ ಆಗಿ ಬಿಜೆಪಿಯ ಹರ್ಪ್ರೀತ್‌ ಕೌರ್‌ ಬಬ್ಲಾ ಆಯ್ಕೆ; INDIA ಮೈತ್ರಿಕೂಟಕ್ಕೆ ಮುಖಭಂಗ

ಇಂದು ನಡೆದ ಚಂಡಿಘಡ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಯ ಹರ್ಪ್ರೀತ್‌ ಕೌರ್‌ ಬಬ್ಲಾ ಆಯ್ಕೆಯಾಗಿದ್ದಾರೆ. ಆಮ್‌ ಆದ್ಮಿ ಪಕ್ಷ ಆಡಳಿತವಿರುವ ಪಂಜಾಬ್‌ ನಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

36 ಸದಸ್ಯರ ಬಲವುಳ್ಳ ಚಂಡಿಘಡ ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ಹರ್ಪ್ರೀತ್‌ ಕೌರ್‌ ಬಬ್ಲಾ 19 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು.

ಮೇಯರ್‌ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಪ್ರೇಮಲತಾ 17 ಮತಗಳನ್ನು ಗಳಿಸಿದ್ದಾರೆ. ಇವರನ್ನು ಕಾಂಗ್ರೆಸ್‌ ಪಕ್ಷ ಸಹ ಬೆಂಬಲಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಯರ್‌ ಚುನಾವಣೆಯಲ್ಲಿ ಆಮ್‌ ಆದ್ಮಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಮೂವರು ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಹೀಗಾಗಿ ಹರ್ಪ್ರೀತ್‌ ಕೌರ್‌ ಬಬ್ಲಾ ಆಯ್ಕೆ ಸುಲಭವಾಯಿತು.

 

For Latest News Updates, Join Our Whatsapp Community🚩
RELATED ARTICLES

Most Popular