HomeKarnatakaBIG NEWS: ಎಟಿಎಂನ್ನೇ ಹೊತ್ತೊಯ್ದ ಕಳ್ಳರು

BIG NEWS: ಎಟಿಎಂನ್ನೇ ಹೊತ್ತೊಯ್ದ ಕಳ್ಳರು

ಹಾಸನ: ಎಟಿಎಂ ನಲ್ಲಿದ್ದ ಹಣ ಕದಿಯುತ್ತಿದ್ದ ಕಳ್ಳರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಎಟಿಎಂನ್ನೇ ಹೊತ್ತೊಯ್ದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಗೊರೂರು ರಸ್ತೆಯಲ್ಲಿರುವ ಹನುಮಂತಪುರದಲ್ಲಿ ತಡ ರಾತ್ರಿ ಕಳ್ಳರು ಇಂಡಿಯಾ ಒನ್ ಬ್ಯಾಂಕ್ ನ ಎಟಿಎಂ ಹೊತ್ತೊಯ್ದಿದ್ದಾರೆ. ರಾಜ್ಯ ಹೆದ್ದಾರಿಯ ಬಳಿ ಇದ್ದ ಎಟಿಎಂ ಇದಾಗಿದ್ದು, ಕಳ್ಳರು ಎಟಿಎಂ ಸಮೇತ ಪರಾರಿಯಾಗಿದ್ದಾರೆ.

ಬೆಳಿಗ್ಗೆ ಎಟಿಎಂಗೆ ಬದಾಗ ಎಟಿಎಂ ಯಂತ್ರವೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು, ಬೆರಳಚ್ಚು ತಜ್ಞರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಡಹಗಲೇ ಬೀದರ್, ಮಂಘಲುರು, ಮೈಸೂರಿನಲ್ಲಿ ದರೋಡೆ ಪ್ರಕರನ ನಡೆದ ಬೆನ್ನಲ್ಲೇ ಇದೀಗ ಎಟಿಎಂನ್ನೇ ಕಳ್ಲರು ಹೊತ್ತೊಯ್ದ ಪ್ರಕರಣ ಬೆಳಕಿಗೆ ಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular