HomeKarnataka17ರಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ: ಬಿ.ವೈ.ವಿಜಯೇಂದ್ರ

17ರಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಜೀ ಅವರ ಅಪೇಕ್ಷೆಯಂತೆ ಇದೇ ಸೆ.17ರಿಂದ ಅಕ್ಟೋಬರ್ 17ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ 25 ವರ್ಷಗಳ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ಅಭಿಯಾನ ನಡೆಯಲಿದೆ. ಪ್ರತಿ ಬೂತ್‍ನಲ್ಲಿ ಹಾಗೂ ರಾಜ್ಯದ ಮನೆಮನೆಗಳಲ್ಲಿ ಆಶೀರ್ವಾದದ ದೀಪ ಸೇರಿ 12 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೇವಾ ಸಂಕಲ್ಪ ಅಭಿಯಾನದ ವಿವರಗಳು

‘ಭಾರತದ ಕನಸು’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆ ಆಯೋಜಿಸಲಾಗುವುದು. ನಮೋ ಸೇವಾ ಬೀದಿನಾಟಕ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರದ ಪರಿವರ್ತನೆಯನ್ನು ತಿಳಿಸಲಾಗುವುದು. ಅಂಗನವಾಡಿ ಮಿಲನ ಎಂಬ ಕಾರ್ಯಕ್ರಮವನ್ನೂ ಏರ್ಪಡಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

‘ಬದಲಾವಣೆಯ ಕಥೆ’ ಮೂಲಕ ಮೋದಿಜೀ ಅವರ ಯೋಜನೆಗಳು ಮತ್ತು ಫಲಾನುಭವಿಗಳ ಮೇಲೆ ಆದ ಪರಿಣಾಮವನ್ನು ತಿಳಿಸಿಕೊಡಲಿದ್ದೇವೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ, ಸೇವಾ ಜ್ಯೋತಿ ಯಾತ್ರೆಯೂ ನಡೆಯಲಿದೆ. ಇದು ರಾಷ್ಟ್ರವ್ಯಾಪಿ ಯಾತ್ರೆ ಎಂದು ತಿಳಿಸಿದರು.

ವಾರಣಾಸಿಗೆ ನದಿಗಳ ಪವಿತ್ರ ಜಲವನ್ನು ಒಯ್ಯುವ ಯಾತ್ರೆಯೂ ಇದೆ. ಸೇವೆಯೇ ನನ್ನ ಕೊಡುಗೆ ಎಂಟನೆಯದು. ಇದರಡಿ ರಕ್ತದಾನ ಶಿಬಿರ, ಸಸಿ ನೆಡುವುದು, ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಪ್ಲಾಸ್ಟಿಕ್ ಜಾಗೃತಿ, ಸೈಬರ್ ಭದ್ರತಾ ಜಾಗೃತಿ ಸೇರಿ 25 ಸೇವಾ ಚಟುವಟಿಕೆಗಳಿರುತ್ತವೆ ಎಂದು ವಿವರಿಸಿದರು.

ಸೇವೆ ಮತ್ತು ಜನಕಲ್ಯಾಣ ಯೋಜನೆಗಳು

ಸೇವಾ ಸೇತು ಅಭಿಯಾನದ ಮೂಲಕ ಕೇಂದ್ರ ಸರಕಾರದ ಜನಕಲ್ಯಾಣ ಯೋಜನೆಗಳ ಮಾಹಿತಿ ಕೊಡಲಿದ್ದೇವೆ. ಅರ್ಹರನ್ನು ನೋಂದಣಿ ಮಾಡಲಿದ್ದೇವೆ. ರಂಗೋಲಿ ರಾಷ್ಟ್ರ ಎಂಬ ಇನ್ನೊಂದು ಕಾರ್ಯಕ್ರಮವೂ ಇದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಆವಿಷ್ಕಾರ ಸವಾಲು ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ನವ ಉದ್ಯಮಿಗಳು ಭಾಗವಹಿಸಬಹುದು ಎಂದರು. ಜನಸೇವಕ ಮಹಾಕುಂಭ ಎಂಬ 12ನೇ ಕಾರ್ಯಕ್ರಮವಿದ್ದು, ಪಂಚಾಯಿತಿ ಮಟ್ಟದಿಂದ ಸಂಸದರವರೆಗೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಹೇಳಿದರು. ಸಾಮೂಹಿಕವಾಗಿ ವಂದೇ ಮಾತರಂ ಹಾಡುವ ಕಾರ್ಯಕ್ರಮ ನಡೆಯಲಿದ್ದು, 1.25 ಲಕ್ಷ ಜನಪ್ರತಿನಿಧಿಗಳು ಭಾಗವಹಿಸಿ ಹಾಡಿನ ಎಲ್ಲ ಚರಣಗಳನ್ನು ಹಾಡುತ್ತಾರೆ. ಇದೊಂದು ವಿಶ್ವ ದಾಖಲೆ ಆಗಲಿದೆ ಎಂದು ತಿಳಿಸಿದರು.

ಮೋದಿಜೀ ಅವರು ಯಾವುದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದೇ, ಸ್ವಚ್ಛ ಚಾರಿತ್ರ್ಯವಂತ ಆಡಳಿತವನ್ನು ನೀಡಿದ್ದಾರೆ. ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಮುಂದಿಟ್ಟು, ದೇಶದಪ್ರಧಾನ ಸೇವಕ ಎಂಬ ಭಾವನೆಯಿಂದ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಭಾರತದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮಗಳು ಮತ್ತು ತಂಡದ ರಚನೆ

ಇವುಗಳ ಯಶಸ್ಸಿಗಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್.ನಂದೀಶ್ ರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಶಾಸಕ ಶೈಲೇಂದ್ರ ಬೆಲ್ದಾಳೆ, ಇತರ ಪ್ರಮುಖರ ತಂಡ ರಚಿಸಲಾಗಿದೆ ಎಂದು ಹೇಳಿದರು. ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಜಿಲ್ಲಾ, ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.

ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್.ನಂದೀಶ್ ರೆಡ್ಡಿ, ಪ್ರೀತಂ ಗೌಡ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular