HomeLatest Newsಸ್ಮಶಾನದ ಒಳಗಡೆ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ: ಡೆಲಿವರಿ ಬಾಯ್ ಕೊಟ್ಟ ಮಸ್ತ್ ರಿಪ್ಲೈ ಈಗ...

ಸ್ಮಶಾನದ ಒಳಗಡೆ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ: ಡೆಲಿವರಿ ಬಾಯ್ ಕೊಟ್ಟ ಮಸ್ತ್ ರಿಪ್ಲೈ ಈಗ ಫುಲ್ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಈಗ “ಡಿನ್ನರ್ ಇನ್ ಗ್ರೇವ್‌ಯಾರ್ಡ್” (ಸ್ಮಶಾನದಲ್ಲಿ ಭೋಜನ) ಎಂಬ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ರಾತ್ರಿ ವೇಳೆ ಆಹಾರ ವಿತರಿಸಲು ಹೋದ ಡೆಲಿವರಿ ಬಾಯ್ ಅನುಭವಿಸಿದ ದಿಗಿಲು ಮತ್ತು ಆತ ನೀಡಿದ ತಮಾಷೆಯ ಉತ್ತರ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಈ ವಿಡಿಯೋ ಒಂದೆಡೆ ತಮಾಷೆಯಾಗಿದ್ದರೆ, ಮತ್ತೊಂದೆಡೆ ಸ್ವಲ್ಪ ಭಯವನ್ನೂ ಹುಟ್ಟಿಸುವಂತಿದೆ.

ವೈರಲ್ ಆಗಿರುವ ಈ ರೀಲ್‌ನಲ್ಲಿ, ಗಾಢವಾದ ಕತ್ತಲೆಯ ಸಮಯದಲ್ಲಿ ಡೆಲಿವರಿ ಬಾಯ್ ಒಬ್ಬರು ಆಹಾರದ ಪಾರ್ಸೆಲ್ ಹಿಡಿದು ಲೊಕೇಶನ್‌ಗೆ ತಲುಪುತ್ತಾರೆ. ಆದರೆ ಆ ಸ್ಥಳವನ್ನು ನೋಡಿದ ಅವರಿಗೆ ಒಂದು ಕ್ಷಣ ಶಾಕ್ ಆಗುತ್ತದೆ. ಅದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಸ್ಮಶಾನದ ಮುಂಭಾಗ ಅಲ್ಲಿಗೆ ತಲುಪಿದ ಮೇಲೆ ಗ್ರಾಹಕರಿಗೆ ಕರೆ ಮಾಡಿದಾಗ, ಒಳಗಿನಿಂದ ಮಹಿಳೆಯೊಬ್ಬರ ಧ್ವನಿ ಕೇಳಿಬರುತ್ತದೆ. ಆಕೆ “ನೇರವಾಗಿ ಒಳಗಡೆ ಬನ್ನಿ” (ಸೀಧಾ ಅಂದರ್ ಆ ಜಾವೋ) ಎಂದು ಹೇಳುತ್ತಾರೆ.

ಕತ್ತಲೆಯಲ್ಲಿ ಸ್ಮಶಾನದ ಗೇಟಿನ ಮುಂದೆ ನಿಂತಿದ್ದ ಡೆಲಿವರಿ ಬಾಯ್, ಒಳಗೆ ಹೋಗಲು ನಿರಾಕರಿಸುತ್ತಾರೆ. ಅಷ್ಟೇ ಅಲ್ಲದೆ, ಅವರು ಕೊಟ್ಟ ಪಂಚ್ ಲೈನ್ ಈಗ ಎಲ್ಲೆಡೆ ವೈರಲ್ ಆಗಿದೆ. “ನಾನು ಬಿರಿಯಾನಿ ಡೆಲಿವರಿ ಮಾಡಲು ಬಂದಿದ್ದೇನೆಯೇ ಹೊರತು, ಇಲ್ಲಿರುವ ಭೂತಗಳಿಗೆ ಡಿನ್ನರ್ ಆಗಲು ಅಲ್ಲ” ಎಂದು ಹಾಸ್ಯಮಯವಾಗಿ ಹೇಳಿ ಅಲ್ಲಿಗೆ ಹೋಗಲು ನಿರಾಕರಿಸಿದ್ದಾರೆ. ಅವರ ಈ ಸಮಯೋಚಿತ ನಿರ್ಧಾರ ಮತ್ತು ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ಈಗ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ನಗುವಿನ ಅಲೆ ಎದ್ದಿದೆ. ಒಬ್ಬ ಬಳಕೆದಾರರು ಇದನ್ನು “ಇಂಡಿಯನ್ ವರ್ಷನ್ ಆಫ್ ಸ್ಟ್ರೇಂಜರ್ ಥಿಂಗ್ಸ್” ಎಂದು ಕರೆದರೆ, ಇನ್ನೊಬ್ಬರು “ಆಕೆಯ ಧ್ವನಿ ಮತ್ತು ಸ್ಮಶಾನದ ವಾತಾವರಣ ಎರಡೂ ಭಯಾನಕವಾಗಿದೆ” ಎಂದು ಬರೆದಿದ್ದಾರೆ. ಇನ್ನು ಕೆಲವರು ತಮಗೂ ಇಂತಹ ವಿಚಿತ್ರ ಅನುಭವಗಳಾಗಿವೆ ಎಂದು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಕೆಲಸದ ಒತ್ತಡದ ನಡುವೆಯೂ ಡೆಲಿವರಿ ಬಾಯ್ ತೋರಿದ ಈ ಚಮತ್ಕಾರಿ ನಡೆ ಎಲ್ಲರ ಗಮನ ಸೆಳೆದಿದೆ.

https://www.instagram.com/reel/DULav_kivqk/?utm_source=ig_web_copy_link

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular