HomeLatest Newsತಾಯಿ ಜೊತೆ ಅಕ್ರಮ ಸಂಬಂಧ: ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದು ಶವದ ಮೇಲೆ ನಿಂತು ಪೊಲೀಸರಿಗೆ ಕರೆ...

ತಾಯಿ ಜೊತೆ ಅಕ್ರಮ ಸಂಬಂಧ: ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದು ಶವದ ಮೇಲೆ ನಿಂತು ಪೊಲೀಸರಿಗೆ ಕರೆ ಮಾಡಿದ ಆರೋಪಿ

ಬೆಳಗಾವಿ: ತಾಯಿ ಜೊತೆ ಅಕ್ರಮ ಸಂಬಂಧವಿಟ್ತುಕೊಂಡು ಆಕೆಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ಮಗನೊಬ್ಬ, ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದು ಶವದ ಮೇಲೆ ನಿಂತು ಪೊಲೀಸರಿಗೆ ಕರೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿಯೊಂದಿಗೆ ಓಡಿಹೋಗಿದ್ದ ವ್ಯಕ್ತಿ ಬಸಪ್ಪ ಹೊಸಮನಿ ಎಂಬಾತನ್ನು 16 ಬಾರಿ ಚಾಕುವಿನಿಂದ ಇರಿದು ಕೊಲೆ ಗೈದಿದ್ದಾನೆ. ಈರಯ್ಯ ಮಠಪತಿ ಕೊಲೆ ಮಾಡಿರುವ ಆರೋಪಿ.

ಸಡೋಣಿ ಗ್ರಾಮದ ಬಸಪ್ಪ, ೧೦ ವರ್ಷಗಳ ಹಿಂದೆ ಈರಯ್ಯನ ತಾಯಿ ಜೊತೆ ಅಕ್ರಮ ಸಂಬಂಧವಿರಿಸಿಕೊಂಡು ಆಕೆಯೊಂದಿಗೆ ಮಹಾರಾಷ್ಟ್ರಕ್ಕೆ ಓಡಿಹೋಗಿದ್ದ, ಹತ್ತು ವರ್ಷಗಳಿಂದಲೂ ಈರಯ್ಯ ಬಸಪ್ಪನ ಕೊಲೆಗಾಗಿ ಕಾದಿದ್ದ. ಬಸಪ್ಪಹೂಲಿಕಟ್ಟೆ ಗ್ರಾಮಕ್ಕೆ ಈಗ ಕಾಲಿಡುತ್ತಿದಂತೆ ಆತನ ಮೇಲೆ ಹಲ್ಲೆ ನಡೆಸಿ, ೧೬ ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆ ಬಳಿಕ ಶವದ ಮೇಲೆ ಸಿನಿಮಾ ಸ್ಟೈಲ್ ನಲ್ಲಿ ಮೆಟ್ಟಿ ನಿಂತು ಪೊಲೀಸರುಗೆ ಕರೆ ಮಾಡಿದ್ದಾನೆ. ಭೀಕರ ಕೊಲೆ ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಸದ್ಯ ಸವದತ್ತಿ ಪೊಲೀಸರು ಆರೋಪಿ ಈರಯ್ಯನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular