HomeRecipiesನಾಲಿಗೆಗೆ ಹೊಸ ರುಚಿ ನೀಡುವ ಬಿಹಾರಿ ಶೈಲಿಯ ಸತ್ತು ಚಟ್ನಿ: ಸ್ನ್ಯಾಕ್ಸ್ ಜೊತೆ ಸವಿಯಲು ಸಖತ್...

ನಾಲಿಗೆಗೆ ಹೊಸ ರುಚಿ ನೀಡುವ ಬಿಹಾರಿ ಶೈಲಿಯ ಸತ್ತು ಚಟ್ನಿ: ಸ್ನ್ಯಾಕ್ಸ್ ಜೊತೆ ಸವಿಯಲು ಸಖತ್ ಕಾಂಬಿನೇಷನ್

ಉತ್ತರ ಭಾರತದಲ್ಲಿ, ವಿಶೇಷವಾಗಿ ಬಿಹಾರದಲ್ಲಿ ‘ಸತ್ತು’ (ಹುರಿದ ಕಡಲೆ ಹಿಟ್ಟು) ಅತ್ಯಂತ ಜನಪ್ರಿಯ ಆಹಾರ ಪದಾರ್ಥವಾಗಿದೆ. ಸತ್ತು ಪರಾಟ, ಸತ್ತು ಶರ್ಬತ್‌ನಂತೆ ಬಿಹಾರಿ ಶೈಲಿಯ ‘ಸತ್ತು ಚಟ್ನಿ’ ಕೂಡ ಊಟದ ರುಚಿಯನ್ನು ದುಪ್ಪಟ್ಟುಗೊಳಿಸುವ ಅತ್ಯುತ್ತಮ ಸೈಡ್ ಡಿಶ್ ಆಗಿದೆ. ರೊಟ್ಟಿ, ಪರಾಟ ಅಥವಾ ಯಾವುದೇ ಭಾರತೀಯ ಸ್ನ್ಯಾಕ್ಸ್ ಜೊತೆ ನಾಲಿಗೆಗೆ ಚುರುಕು ಮುಟ್ಟಿಸುವ ಈ ವಿಶಿಷ್ಟ ಚಟ್ನಿಯನ್ನು ಸುಲಭವಾಗಿ ಹೇಗೆ ತಯಾರಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

  • ಸತ್ತು (ಹುರಿದ ಕಡಲೆ ಹಿಟ್ಟು) – 1 ಕಪ್
  • ಸಣ್ಣಗೆ ಹೆಚ್ಚಿದ ಈರುಳ್ಳಿ – 1
  • ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 2 ರಿಂದ 3
  • ಕೊತ್ತಂಬರಿ ಸೊಪ್ಪು – 2 ಚಮಚ
  • ಲಿಂಬೆ ರಸ – 1 ಚಮಚ
  • ಸಾಸಿವೆ ಎಣ್ಣೆ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ನೀರು – ಅಗತ್ಯವಿರುವಷ್ಟು

ತಯಾರಿಸುವ ವಿಧಾನ ಮೊದಲು ಒಂದು ಪಾತ್ರೆಯಲ್ಲಿ ಸತ್ತು ಹಿಟ್ಟು, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಲಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೊಮ್ಮೆ ಬೆರೆಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ, ಗಂಟಿಲ್ಲದಂತೆ ನಿರಂತರವಾಗಿ ಕೈಯಾಡಿಸುತ್ತಾ ಚಟ್ನಿಯ ಹದಕ್ಕೆ (Smooth Consistency) ತರಬೇಕು. ಈಗ ಒಂದು ಸಣ್ಣ ಪ್ಯಾನ್‌ನಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ, ನಂತರ ಅದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಈ ಎಣ್ಣೆಯನ್ನು ಸಿದ್ಧಪಡಿಸಿದ ಚಟ್ನಿಯ ಮೇಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಎಲ್ಲಾ ಮಸಾಲೆಗಳು ಮತ್ತು ಸಾಸಿವೆ ಎಣ್ಣೆಯ ಘಮವು ಚಟ್ನಿಯಲ್ಲಿ ಚೆನ್ನಾಗಿ ಬೆರೆಯಲು 10 ರಿಂದ 15 ನಿಮಿಷಗಳ ಕಾಲ ಹಾಗೇ ಬಿಡಿ. ಈಗ ರುಚಿಕರವಾದ ಬಿಹಾರಿ ಶೈಲಿಯ ಸತ್ತು ಚಟ್ನಿ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular