HomeLatest Newsಬ್ರಿಟಿಷ್ ಚಿಪ್ ಶಾಪ್ ಸ್ಫೂರ್ತಿಯಿಂದ ಹುಟ್ಟಿದ 'ಖಡಿ-ಫ್ರೆಂಚ್ ಫ್ರೈಸ್' ಕಾಂಬೋ: ನೆಟ್ಟಿಗರ ಗಮನ ಸೆಳೆದ ಕಂಟೆಂಟ್...

ಬ್ರಿಟಿಷ್ ಚಿಪ್ ಶಾಪ್ ಸ್ಫೂರ್ತಿಯಿಂದ ಹುಟ್ಟಿದ ‘ಖಡಿ-ಫ್ರೆಂಚ್ ಫ್ರೈಸ್’ ಕಾಂಬೋ: ನೆಟ್ಟಿಗರ ಗಮನ ಸೆಳೆದ ಕಂಟೆಂಟ್ ಕ್ರಿಯೇಟರ್ ವೀಡಿಯೋ!

ಸಾಮಾನ್ಯವಾಗಿ ಫ್ರೆಂಚ್ ಫ್ರೈಸ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಟೊಮ್ಯಾಟೋ ಕೆಚಪ್, ಚೀಸ್ ಅಥವಾ ಮೇಯೋನೈಸ್. ಆದರೆ ಆಹಾರ ಪ್ರಿಯರೊಬ್ಬರು ಫ್ರೆಂಚ್ ಫ್ರೈಸ್ ಸವಿಯಲು ಕಂಡುಕೊಂಡಿರುವ ವಿಭಿನ್ನ ಹಾಗೂ ಅಪರೂಪದ ಶೈಲಿ ಇದೀಗ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಫುಡ್ ಕಂಟೆಂಟ್ ಕ್ರಿಯೇಟರ್ ರೆಜೆ ಎಂಬುವವರು ಗರಿಗರಿಯಾದ ಫ್ರೆಂಚ್ ಫ್ರೈಸ್ ಜೊತೆಗೆ ಪಂಜಾಬಿ ಶೈಲಿಯ ‘ಖಡಿ ಪಕೋಡ’ ಸೇರಿಸಿ ಸವಿಯುತ್ತಿರುವ ವೀಡಿಯೋ ಹಂಚಿಕೊಂಡಿದ್ದು, ಕಂಟೆಂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

1970 ರ ಬ್ರಿಟಿಷ್ ಚಿಪ್ ಶಾಪ್ ಲಿಂಕ್: ಈ ವಿಶಿಷ್ಟ ಆಹಾರದ ಸಂಯೋಜನೆಯ ಹಿಂದೆ ತಮ್ಮ ತಾಯಿಯ ಸವಿನೆನಪಿದೆ ಎಂದು ಕ್ರಿಯೇಟರ್ ರೆಜೆ ಹೇಳಿಕೊಂಡಿದ್ದಾರೆ. 1970 ರ ದಶಕದಲ್ಲಿ ಇಂಗ್ಲೆಂಡ್‌ನ ‘ಬ್ರಿಟಿಷ್ ಫಿಶ್ ಅಂಡ್ ಚಿಪ್ ಶೋ’ಗೆ ಭೇಟಿ ನೀಡಿದ್ದ ರೆಜೆ ಅವರ ತಾಯಿ, ಅಲ್ಲಿ ಫ್ರೈಸ್‌ಗೆ ನೀಡುತ್ತಿದ್ದ ಸಾಮಾನ್ಯ ಕರಿ ಸಾಸ್ ಬದಲಿಗೆ ಪಂಜಾಬಿ ಶೈಲಿಯ ಮೊಸರು ಹಾಗೂ ಮಸಾಲೆ ಬಳಸಿ ತಯಾರಿಸುವ ಖಡಿಯನ್ನು ಬಳಸಿ ಮೊದಲ ಬಾರಿಗೆ ಪ್ರಯೋಗ ಮಾಡಿದ್ದರು. ಬಿಸಿಬಿಸಿ ಖಡಿಯು ಪಕೋಡವನ್ನು ಮೃದುಗೊಳಿಸಿದರೆ, ಫ್ರೆಂಚ್ ಫ್ರೈಸ್ ಗರಿಗರಿಯಾದ ರುಚಿ ನೀಡುತ್ತದೆ.

ಬಲ್ಯದ ನೆನಪು ಹಂಚಿಕೊಂಡ ಕ್ರಿಯೇಟರ್: “ನನ್ನ ಬಾಲ್ಯದಿಂದಲೂ ಅಮ್ಮ ಪ್ರತಿ ಎರಡು ವಾರಕ್ಕೊಮ್ಮೆ ಖಡಿ ತಯಾರಿಸುತ್ತಿದ್ದರು. ಮೊದಲ ದಿನ ಅದನ್ನು ಅನ್ನದ ಜೊತೆ ಸವಿದರೆ, ಎರಡನೇ ದಿನ ಫ್ರೆಂಚ್ ಫ್ರೈಸ್ ಜೊತೆ ತಿನ್ನುತ್ತಿದ್ದೆವು. ಎರಡನೇ ದಿನದ ಕಾಂಬಿನೇಷನ್ ನಮಗೆ ಅತ್ಯಂತ ಇಷ್ಟವಾಗುತ್ತಿತ್ತು. ಇದು ನನ್ನ ಬಾಲ್ಯದ ನೆನಪುಗಳನ್ನು ಮರಳಿ ತರುತ್ತದೆ” ಎಂದು ರೆಜೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋಗೆ ಕಾಮೆಂಟ್ ಮಾಡಿರುವ ಅನೇಕ ನೆಟ್ಟಿಗರು ಈ ವಿಭಿನ್ನ ರೆಸಿಪಿಗೆ ಫಿದಾ ಆಗಿದ್ದು, ತಾವೂ ಒಮ್ಮೆ ಇದನ್ನು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಡಿ ಫ್ರೈಸ್ ರೆಸಿಪಿ ಮಾಡುವ ಸರಳ ವಿಧಾನ: ಮೊಸರು, ಕಡಲೆ ಹಿಟ್ಟು, ಅರಿಶಿನ ಹಾಗೂ ಉಪ್ಪು ಸೇರಿಸಿ ತಳ ಭಾಗದ ಗ್ರೇವಿ ಸಿದ್ಧಪಡಿಸಿಕೊಳ್ಳಿ. ಸಾಸಿವೆ ಎಣ್ಣೆಯಲ್ಲಿ ಸಾಸಿವೆ, ಧನಿಯಾ, ಜೀರಿಗೆ, ಕರಿಬೇವು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಗೂ ಟೊಮೆಟೊ ಹಾಕಿ ಒಗ್ಗರಣೆ ನೀಡಿ. ನಂತರ ಸಿದ್ಧಪಡಿಸಿದ ಮೊಸರಿನ ಮಿಶ್ರಣವನ್ನು ಸೇರಿಸಿ 25 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯಲ್ಲಿ ಪಕೋಡ ಹಾಗೂ ಗರಂ ಮಸಾಲಾ ಸೇರಿಸಿ ಸ್ವಲ್ಪ ಸಮಯ ಬೇಯಿಸಿದರೆ ಬಿಸಿಬಿಸಿ ಖಡಿ ಪಕೋಡ ಸಿದ್ಧವಾಗುತ್ತದೆ. ಇದನ್ನು ಗರಿಗರಿಯಾದ ಫ್ರೆಂಚ್ ಫ್ರೈಸ್ ಜೊತೆ ಡಿಪ್ ಮಾಡಿ ಸವಿಯಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular